ಬೈಲೂರು–ಕೊರಂಗ್ರಪಾಡಿ ರಸ್ತೆ ವಿಸ್ತರಣೆಗೆ ಚಾಲನೆ

ಉಡುಪಿ: ಬೈಲೂರು–-ಕೊರಂಗ್ರಪಾಡಿ ರಸ್ತೆಯ 40 ಫೀಟ್‌ ವಿಸ್ತರಣೆ ಕಾಮಗಾರಿಗೆ ಶಾಸಕ ರಘುಪತಿ ಭಟ್‌ ಗುರುವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಶಾಸಕರು, ರಸ್ತೆ ವಿಸ್ತರಣೆಗೆ ಜನರು ಸ್ವ ಇಚ್ಚೆಯಿಂದ ತಮ್ಮ ಜಾಗವನ್ನು ಬಿಟ್ಟುಕೊಟ್ಟಿದ್ದು, ಭೂ ಮಾಲೀಕರಿಗೆ ಯಾವುದೇ ಪರಿಹಾರ ನೀಡಬೇಕಾದ ಅವಶ್ಯಕತೆ ಇಲ್ಲದಿರುವುದರಿಂದ ನಗರಾಭಿವೃದ್ಧಿ ಪ್ರಾಧಿಕಾರದಿಂದ ಟಿಡಿಆರ್‌ ನಿಯಮದಡಿ ರಸ್ತೆ ಅಭಿವೃದ್ಧಿಪಡಿಸಲಾಗುವುದು ಎಂದರು. ಪ್ರಸ್ತುತ ಇದ್ದ 15 ಫೀಟ್‌ ರಸ್ತೆಯನ್ನು 40 ಫೀಟ್‌ಗೆ ವಿಸ್ತರಣೆ ಮಾಡಲಾಗುತ್ತದೆ. ರಸ್ತೆಗೆ ಬೇಕಾದ ಸ್ಥಳವನ್ನು ಉಚಿತವಾಗಿ ನೀಡಲು ಸಹಕರಿಸಿದ ಭೂ ಮಾಲೀಕರಿಗೆ […]