ಬಾಸ್ಕೆಟ್ ಬಾಲ್ ಮತ್ತು ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಜ್ಞಾನಸುಧಾ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ
ಕಾರ್ಕಳ: ಪದವಿ ಪೂರ್ವಶಿಕ್ಷಣ ಇಲಾಖೆ ಹಾಗೂ ಶ್ರೀ ಶಾರದಾ ಪಿಯು ಕಾಲೇಜು ಉಡುಪಿ ಜಂಟಿ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾ ಕಾಲೇಜಿನ ಬಾಲಕರ ಹಾಗೂ ಬಾಲಕಿಯರ ತಂಡವು ದ್ವಿತೀಯ ಸ್ಥಾನ ಗಳಿಸಿ, ಬಾಲಕರ ತಂಡದ ಪ್ರಥಮ ವಿಜ್ಞಾನ ವಿಭಾಗದ ಶಾಶ್ವತ್.ಎಂ.ಆರ್., ಕೆ.ಗಗನ್, ಕಾರ್ತಿಕ್ ಕಾಮತ್ ಹಾಗೂ ಬಾಲಕಿಯರ ತಂಡದ ಪ್ರಥಮ ವಿಜ್ಞಾನ ವಿಭಾಗದ ಬಾಲಚನ್ನ ವೈನವಿ, ಸಂಜನಾ.ವಿ.ಬೆಸ್ಕೂರ್, ದ್ವಿತೀಯ ವಿಜ್ಞಾನ ವಿಭಾಗದ ಸಾನ್ವಿ ಶೆಟ್ಟಿ ದಾವಣಗೆರೆಯಲ್ಲಿ ನಡೆಯುವ ರಾಜ್ಯಮಟ್ಟದ ಬಾಸ್ಕೆಟ್ […]
ಚಿನ್ನದ ಹುಡುಗಿ ಪಿ.ವಿ ಸಿಂಧು ಅವರಿಂದ ಅದ್ಭುತ ಪ್ರದರ್ಶನ: ಕಾಮನ್ ವೆಲ್ತ್ ಬ್ಯಾಂಡ್ಮಿಂಟನ್ ನಲ್ಲಿ ಸ್ವರ್ಣ ಪದಕ
ಬರ್ಮಿಂಗ್‌ಹ್ಯಾಮ್: ಇಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು ಅದ್ಭುತ ಪ್ರದರ್ಶನ ನೀಡಿ ಚಿನ್ನದ ಪದಕ ಗೆದ್ದು ಬೀಗಿದ್ದಾರೆ. ಭಾರತದ ಷಟ್ಲರ್ ಪಿವಿ ಸಿಂಧು ಅವರು ಫೈನಲ್‌ನಲ್ಲಿ ಮಿಚೆಲ್ ಲೀ ಅವರನ್ನು 21-15, 21-13 ಸೆಟ್ ಗಳಿಂದ ಸೋಲಿಸುವ ಮೂಲಕ ದೇಶವೆ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಇದು ಆಕೆಯ ಚೊಚ್ಚಲ ಚಿನ್ನದ ಪದಕವಾಗಿದೆ. ಈ ಹಿಂದೆ 2014 ಗ್ಲಾಸ್ಗೋದಲ್ಲಿ ಕಂಚು ಮತ್ತು 2018 […]
ಸಿಂಗಾಪುರ ಓಪನ್: ಫೈನಲ್ ಪ್ರವೇಶಿಸಿದ ಪಿ.ವಿ ಸಿಂಧು
ಭಾರತದ ಬ್ಯಾಡ್ಮಿಂಟನ್ ಪಟು ಪಿವಿ ಸಿಂಧು 21-15, 21-7 ಸೆಟ್‌ಗಳಿಂದ ಜಪಾನಿನ ಶಟ್ಲರ್ ಸೈನಾ ಕವಾಕಮಿ ವಿರುದ್ಧ ನೇರ ಗೆಲುವು ಸಾಧಿಸುವ ಮೂಲಕ ಸಿಂಗಾಪುರ ಓಪನ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಕೇವಲ ಅರ್ಧಗಂಟೆಯಲ್ಲಿ ಮುಗಿದ ಪಂದ್ಯದಲ್ಲಿ ಸಿಂಧು ತಮ್ಮ ಎದುರಾಳಿಯನ್ನು ಸೋಲಿಸಿದ್ದಾರೆ ಪಂದ್ಯಾವಳಿಯಲ್ಲಿ ಭಾರತದ ಏಕೈಕ ಸ್ಪರ್ಧಿಯಾಗಿ ಸಿಂಧು ಭಾಗವಹಿಸಿದ್ದಾರೆ.
14 ಬಾರಿಯ ಚಾಂಪಿಯನ್ ಅನ್ನು ಮಣಿಸಿ ಪ್ರಪ್ರಥಮ ಬಾರಿಗೆ ಥಾಮಸ್ ಕಪ್ ಕಿರೀಟವನ್ನು ಗೆದ್ದುಕೊಂಡ ಭಾರತ!!
ಥಾಮಸ್ ಕಪ್ 2022: ಭಾನುವಾರ ಮೇ 15 ರಂದು, ಬ್ಯಾಂಕಾಕ್‌ನಲ್ಲಿ 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾವನ್ನು ಮಣಿಸುವ ಮೂಲಕ ಭಾರತವು ಮೊದಲ ಬಾರಿಗೆ ಥಾಮಸ್ ಕಪ್ ಕಿರೀಟವನ್ನು ಗೆದ್ದುಕೊಂಡಿದೆ. ಭಾರತೀಯ ಆಟಗಾರರಾದ ಲಕ್ಷ್ಯ ಸೇನ್, ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ ಮತ್ತು ಕಿದಂಬಿ ಶ್ರೀಕಾಂತ್ ಅವರು 3-0 ಅಂತರದಿಂದ 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾವನ್ನು ಮಣಿಸಿ ಹೊಸ ಇತಿಹಾಸ ರಚಿಸಿದ್ದಾರೆ. # ಥಾಮಸ್ ಕಪ್ ಫೈನಲ್‌ನಲ್ಲಿ ಭಾರತವು 3-0 ಅಂತರದಲ್ಲಿ ಇಂಡೋನೇಷ್ಯಾವನ್ನು ಸೋಲಿಸಿದೆ. # ಶ್ರೀಕಾಂತ್ ಅವರು ಜೊನಾಥನ್ […]
ಉಡುಪಿ: ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆ ಸಮಾರೋಪ
ಉಡುಪಿ: ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ವತಿಯಿಂದ ಬ್ಯಾಂಕ್ ಆಫ್ ಬರೋಡ ಸಹ ಪ್ರಾಯೋಜಕತ್ವದಲ್ಲಿ 13 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರಿಗೆ ಮಣಿಪಾಲದ ಮರಿನಾ ಒಳಾಂಗಣ ಕ್ರೀಡಾಂಗಣ ಮತ್ತು ಅಜ್ಜರಕಾಡು ಒಳಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಭಾರತ ಸಬ್ ಜ್ಯೂನಿಯರ್ ರ‍್ಯಾಂಕಿಂಗ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಮೆಂಟ್ ನ ಸಮಾರೋಪ ಸಮಾರಂಭ ಭಾನುವಾರ ನಡೆಯಿತು. ವಿಜೇತರ ಪಟ್ಟಿ ಹೀಗಿದೆ: 13 ವರ್ಷ ಬಾಲಕರ ವಿಭಾಗ-ಅನ್ಶ್ ನೇಗಿ (ಉತ್ತರಾಖಂಡ್), ಬಾಲಕಿಯರ ವಿಭಾಗ- ಉನ್ನತಿ ಹೂಡಾ (ಹರ್ಯಾಣ), 13 ವರ್ಷ ಬಾಲಕರ ಡಬಲ್ಸ್- ವನ್ಶ್ ಪ್ರತಾಪ್ […]