ಕೆನಡಾ ಓಪನ್ 2023 ಬ್ಯಾಡ್ಮಿಂಟನ್ ಪಂದ್ಯಾವಳಿ ಭಾರತವನ್ನು ಮುನ್ನಡೆಸಲಿದ್ದಾರೆ ಪಿವಿ ಸಿಂಧು, ಲಕ್ಷ್ಯ ಸೇನ್

ಟೊರೊಂಟೊ(ಕೆನಡಾ): ಕ್ಯಾಲ್ಗರಿಯಲ್ಲಿ ಇಂದಿನಿಂದ ಪ್ರಾರಂಭವಾಗುವ ಕೆನಡಾ ಓಪನ್ 2023 ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಸ್ಟಾರ್ ಷಟ್ಲರ್‌ಗಳಾದ ಪಿವಿ ಸಿಂಧು ಮತ್ತು ಲಕ್ಷ್ಯ ಸೇನ್ ಭಾರತವನ್ನು ಮುನ್ನಡೆಸಲಿದ್ದಾರೆ.ಗಾಯದಿಂದ ಮರಳಿದ ನಂತರ ಪಿವಿ ಸಿಂಧು ಅವರ ರಾಕೆಟ್​ ಮೌನವಾಗಿದೆ ಎನ್ನಬಹುದು. ಈ ವರ್ಷ ಅವರಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ ಕೆನಡಾ ಓಪನ್​ನಿಂದ ಕಮ್​ಬ್ಯಾಕ್​ ನಿರೀಕ್ಷೆ ಇದೆ. ತೈಪೆ ಓಪನ್ 2023 ಅನ್ನು ಕಳೆದುಕೊಂಡ ನಂತರ ಪಿವಿ ಸಿಂಧು ಮತ್ತೆ ತಮ್ಮ ಹೊಸ ಪ್ರಯಾಣವನ್ನು ಕೆನಡಾ ಓಪನ್​ನಿಂದ ಆರಂಭಿಸಲು ಇಚ್ಚಿಸಿದ್ದಾರೆ. 12ನೇ […]