ಮಾದರಿ ಅಧಿಕಾರಿ: ಖುದ್ದು ತಾಜ್ಯ ಸಂಗ್ರಹಣೆ ಮಾಡಿದ ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ
ಉಡುಪಿ: ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಶನಿವಾರದಂದು ಬಡಗಬೆಟ್ಟು ಗ್ರಾಮಸ್ಥರಿಗೆ ಅಚ್ಚರಿಯನ್ನುಂಟು ಮಾಡಿದರು. ಯಥಾಪ್ರಕಾರ ವಾಹನಕ್ಕೆ ಕಸ ಹಾಕಲು ಬಂದವರಿಗೆ ಮುಖ್ಯಕಾರ್ಯನಿರ್ವಹಣಾಧಿಕಾರಿಯನ್ನು ಕಂಡು ಸೋಜಿಗವಾಗಿದೆ. ಬಡಗಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೆಳಿಗ್ಗೆ ಕಸ ಸಂಗ್ರಹಣೆ ಮಾಡುವ ವಾಹನವನ್ನು ತಾವೇ ಸ್ವತಃ ಚಲಾಯಿಸಿಕೊಂಡು ಮನೆಗಳಿಂದ ಕಸ ಸಂಗ್ರಹಣೆ ಮಾಡಿದ ಪ್ರಸನ್ನ ಅವರು ಮಾದರಿ ಅಧಿಕಾರಿ ಎನ್ನಿಸಿಕೊಂಡಿದ್ದಾರೆ. ಆಡಳಿತವೆ ಖುದ್ದು ಜನರ ಮನೆ ಬಾಗಿಲಿಗೆ ಬಂದಲ್ಲಿ ಜನರ ಕಷ್ಟಗಳು ಪರಿಹಾರವಾಗುವುದು ನಿಶ್ಚಿತ. ಐ.ಎ.ಎಸ್ ಅಧಿಕಾರಿಯೊಬ್ಬರು ಖುದ್ದು ಕಸ […]