ಸೂಕ್ತ ವೈದ್ಯಕೀಯ ಹಸ್ತಕ್ಷೇಪದಿಂದ ಶಿಶುಗಳಲ್ಲಿ ನ್ಯುಮೋನಿಯಾ ಸಂಬಂಧಿತ ಮರಣಗಳನ್ನು ತಡೆಗಟ್ಟಬಹುದು

ಜಗತ್ತಿನೆಲ್ಲೆಡೆ ಮಕ್ಕಳ ಸಾವಿನ ಏಕೈಕ ದೊಡ್ಡ ಕಾರಣಗಳಲ್ಲಿ ನ್ಯುಮೋನಿಯಾ ಒಂದಾಗಿದೆಯಲ್ಲದೇ, ಐದು ವರ್ಷಗಳಿಗಿಂತಲೂ ಕಡಿಮೆ ವಯಸ್ಸಿನ ಶಿಶುಗಳಲ್ಲಿ ಶೇ. 41ಕ್ಕಿಂತ ಹೆಚ್ಚಿನ ಮರಣಗಳಿಗೆ ಕಾರಣವಾಗಿದೆ. ಇವುಗಳನ್ನು ಸಮಯಕ್ಕೆ ಸರಿಯಾದ ಮತ್ತು ಸೂಕ್ತವಾದ ವೈದ್ಯಕೀಯ ಹಸ್ತಕ್ಷೇಪದೊಂದಿಗೆ ತಡೆಗಟ್ಟಬಹುದಾಗಿದೆ. ಹೆಚ್ಚಿನ ಸಂಖ್ಯೆಯ ನ್ಯುಮೋನಿಯಾ ಸಂಬಂಧಿತ ಸಾವುಗಳನ್ನು ತಡೆಯಬಹುದಾಗಿದೆ. ಬ್ಯಾಕ್ಟೀರಿಯಾ, ವೈರಸ್‌ಗಳು, ಶಿಲೀಂಧ್ರಗಳು ಅಥವಾ ಪರಾವಲಂಬಿಗಳಿಂದಾಗಿ ಈ ಶ್ವಾಸಕೋಶದ ತೀವ್ರ ಉಸಿರಾಟದ ಸೋಂಕು ಉಂಟಾಗಬಹುದು. ಇದು ವಾಯು ಮಾಲಿನ್ಯದಿಂದ ಹೆಚ್ಚಾಗುತ್ತದೆ. ಅಲ್ಲದೇ ಇದು ಶಿಶು ಮರಣಗಳ ಪ್ರಾಥಮಿಕ ಕಾರಣಗಳಲ್ಲಿ ಒಂದಾಗಿದೆ. ಅಪೌಷ್ಟಿಕತೆ, […]