ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಿಸುತ್ತೇವೆ: ದೇವೇಗೌಡ

ಮಂಗಳೂರು: ಅಯೋಧ್ಯೆ ವಿವಾದ ಕುರಿತಾದ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. 1992ರಲ್ಲಿ ಬಾಬರಿ ಮಸೀದಿ ಒಡೆದು ಹಾಕಿದ್ದು ಸರಿಯಲ್ಲ ಎಂದು ತೀರ್ಪಲ್ಲಿ ಉಲ್ಲೇಖಿಸಲಾಗಿದೆ. ಮಸೀದಿ ಒಡೆದಿರುವುದು ತಪ್ಪು ಅನ್ನುವುದಾದರೆ ಅಲ್ಪ ಸಂಖ್ಯಾತರಿಗೆ ಹೊಸ ಮಸೀದಿ ನಿರ್ಮಾಣಕ್ಕೆ ಒಂದಿಷ್ಟು ಪರಿಹಾರವನ್ನು ಘೋಷಿಸಬೇಕಿತ್ತು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ. ಮಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಮಾಧ್ಯಮದ ಜತೆಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ತೀರ್ಪನ್ನು ನಾನು ವಿವರವಾಗಿ ಓದಿಲ್ಲ. ಕೇಂದ್ರ ಸರಕಾರವೇ ಪರಿಹಾರ ನೀಡುವಂತೆ ನಿರ್ದೇಶನ ನೀಡಬಹುದಾಗಿತ್ತು ಎಂದರು. […]