ರಾಮಲಲ್ಲಾ ದರ್ಶನ ಪಡೆದ ಪ್ರಧಾನಿ ಮೋದಿ-ಮುಖ್ಯಮಂತ್ರಿ ಯೋಗಿ: ಭರ್ಜರಿ ರೋಡ್ ಶೋ

ಅಯೋಧ್ಯಾ: ಜನವರಿ 22 ರಂದು ಪವಿತ್ರ ನಗರದಲ್ಲಿ ಐತಿಹಾಸಿಕ ರಾಮ ಮಂದಿರದ(Ram Mandir) ಶಂಕುಸ್ಥಾಪನೆಯ ನಂತರ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಮೊದಲ ಬಾರಿಗೆ ಲೋಕಸಭೆ ಚುನಾವಣೆಯ ಮೂರನೇ ಹಂತದ ಚುನಾವಣಾ ಪ್ರಚಾರದ ನಡುವೆ ಭಾನುವಾರ ಉತ್ತರ ಪ್ರದೇಶದ ಅಯೋಧ್ಯೆಗೆ ಭೇಟಿ ನೀಡಿದರು. ಪ್ರಧಾನಿ ಮೋದಿ ರಾಮಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿ ಆ ಬಳಿಕ ನಗರದಲ್ಲಿ ಬೃಹತ್ ರೋಡ್ ಶೋ ನಡೆಸಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಕೂಡ ರಾಮ ಮಂದಿರಕ್ಕೆ ಭೇಟಿ […]

ಸೂರ್ಯವಂಶಿ ರಘುರಾಮನಿಗೆ ರಾಮನವಮಿಯಂದು “ಸೂರ್ಯತಿಲಕ”!! ಏಪ್ರಿಲ್ 17 ರಂದು ರಾಮಲಲ್ಲಾನ ಹಣೆಗೆ ತಿಲಕವಿಡಲಿದ್ದಾನೆ ಸಾಕ್ಷಾತ್ ಸೂರ್ಯದೇವ!!

ಅಯೋಧ್ಯೆ: ಅಯೋಧ್ಯೆಯ ರಾಮಮಂದಿರದ ಅರ್ಚಕರು ವಿಜ್ಞಾನಿಗಳ ಸಮ್ಮುಖದಲ್ಲಿ ‘ಸೂರ್ಯ ತಿಲಕ’ (Surya Tilak) ಪ್ರಯೋಗವನ್ನು ಯಶಸ್ವಿಯಾಗಿ ಪರೀಕ್ಷೆ ಮಾಡಿದ್ದಾರೆ. ಏಪ್ರಿಲ್ 17 ರಂದು ರಾಮನವಮಿ ಹಬ್ಬದ ಸಂದರ್ಭದಲ್ಲಿ ಸೂರ್ಯನ ಕಿರಣಗಳು ವಿಶೇಷವಾಗಿ ತಯಾರಿಸಲಾದ ಕನ್ನಡಿಯ ಮೂಲಕ ಪ್ರತಿಫಲನಗೊಂಡು ಸೂರ್ಯವಂಶಿ ರಘುರಾಮನ ಹಣೆಗೆ ತಿಲಕವನ್ನಿಡಲಿದೆ. ಅದಾಗಲೇ ಎರಡು ಬಾರಿ ಇದನ್ನು ಯಶಸ್ವಿಯಾಗಿ ಪ್ರಯೋಗಿಸಲಾಗಿದೆ. CSIR-ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್ (CBRI) ನ ವಿಜ್ಞಾನಿಗಳು “ಸೂರ್ಯ ತಿಲಕ” ವ್ಯವಸ್ಥೆಯನ್ನು ವಿನ್ಯಾಸಗೊಳಿಸಿದ್ದಾರೆ. ಇದು ಮಧ್ಯಾಹ್ನದ ಸಮಯ ಸುಮಾರು ಆರು ನಿಮಿಷಗಳ ಕಾಲ […]

ಅಯೋಧ್ಯೆಯಲ್ಲಿ ರಾಮಲಲ್ಲಾನ ದರ್ಶನಕ್ಕೆ ಹೋಗುವವರಿಗೆ ಸಲಹೆ ಸೂಚನೆ ಬಿಡುಗಡೆಗೊಳಿಸಿದ ಟ್ರಸ್ಟ್: ಹೋಗುವ ಮುನ್ನ ಇವುಗಳನ್ನು ಗಮನದಲ್ಲಿಡಿ

ಅಯೋಧ್ಯೆ: ಶ್ರೀ ರಾಮ ಜನ್ಮಭೂಮಿ ಮಂದಿರಕ್ಕೆ ಭೇಟಿ ನೀಡುವ ಎಲ್ಲಾ ಭಕ್ತರ ಗಮನಕ್ಕಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಲಹೆ ಸೂಚನೆಗಳನ್ನು ಹೊರಡಿಸಿದೆ. ಅವು ಇಂತಿವೆ

ಅಯೋಧ್ಯೆಯ ಬಾಲರಾಮನಿಂದ ಉಡುಪಿಯ ಬಲರಾಮನೆಡೆಗೆ ಸಂಕರ್ಷಣ ಶಾಲಗ್ರಾಮ

ಉಡುಪಿ: ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠೆಯಾಗಿ ಕೆಲವೇ ದಿನಗಳಲ್ಲಿ ಉಡುಪಿಯ ಮಲ್ಪೆ ವಡಭಾಂಡೇಶ್ವರದ ಇತಿಹಾಸ ಪ್ರಸಿದ್ಧ ಬಲರಾಮನ ಸನ್ನಿಧಿಯೂ ನವೀಕರಣಗೊಳ್ಳುತ್ತಿರುವುದು ಒಂದು ಯೋಗಾನುಯೋಗವೇ ಸರಿ. ಈ ಹಿನ್ನೆಲೆಯಲ್ಲಿ ಉಭಯ ಸನ್ನಿಧಿಗಳ ಬಾಂಧವ್ಯದ ದ್ಯೋತಕವಾಗಿ ಶ್ರೀ ಪೇಜಾವರ ಶ್ರೀಗಳು ಶುಕ್ರವಾರದಂದು ಅಯೋಧ್ಯೆಯ ಬಾಲರಾಮನ ಸನ್ನಿಧಿಯಲ್ಲಿ ಸಂಕರ್ಷಣ ಶಾಲಗ್ರಾಮವೊಂದನ್ನಿಟ್ಟು ಪವಿತ್ರ ಕಲಶೋದಕದಿಂದ ಅಭಷೇಕ ಸಹಿತ ಪೂಜೆ ಮಾಡಿ ವಡಭಾಂಡೇಶ್ವರದ ಬಲರಾಮನ ದಿವ್ಯ ಸನ್ನಿಧಿಗೆ ಕಳುಹಿಸಿಕೊಟ್ಟಿದ್ದಾರೆ. ಮಾ. 22 ರಂದು ದೇವರ ಪುನಃ ಪ್ರತಿಷ್ಠೆ, ಮಾ.25 ರಂದು ಅಷ್ಟಬಂಧ ಬ್ರಹ್ಮ ಕಲಶೋತ್ಸವ, ಮಾ.27 […]

ರಾಮಲಲ್ಲಾನ ದರ್ಶನ ಪಡೆದು ಮಂತ್ರಮುಗ್ದರಾದ ರಕ್ಷಿತ್ ಶೆಟ್ಟಿ; ಅರುಣ್ ಯೋಗಿರಾಜ್ ಅವರನ್ನು ಭೇಟಿಯಾಗುವ ಬಯಕೆ ತೋಡಿಕೊಂಡ ಸಿಂಪಲ್ ಹುಡುಗ

ಅಯೋಧ್ಯಾ: ಕನ್ನಡ ಚಿತ್ರನಟ-ನಿರ್ದೇಶಕ ರಕ್ಷಿತ್ ಶೆಟ್ಟಿ ಅಯೋಧ್ಯಾ ರಾಮಜನ್ಮಸ್ಥಾನದಲ್ಲಿ ನಿರ್ಮಾಣವಾಗಿರುವ ಭವ್ಯ ರಾಮಮಂದಿರಕ್ಕೆ ಭೇಟಿ ನೀಡಿದ್ದು, ರಾಮಲಲ್ಲಾನ ದರ್ಶನ ಪಡೆದು ಮಂತ್ರಮುಗ್ಧರಾಗಿದ್ದಾರೆ. ಪ್ರಾಣಪ್ರತಿಷ್ಠೆ ನಡೆದಾಗಿನಿಂದಲೂ ರಾಮನನ್ನು ನೇರವಾಗಿ ನೋಡಬೇಕುನ್ನುವ ಹಂಬಲವನ್ನು ನಿಜವಾಗಿಸಿಕೊಂಡಿರುವ ರಕ್ಷಿತ್, ಸುಮಾರು ಅರ್ಧ ಗಂಟೆಗಳ ಕಾಲ ರಾಮನ ಮೂರ್ತಿಯನ್ನು ಆತನ ಸೂಜಿಗಲ್ಲಿನಂತೆ ಆಕರ್ಷಿಸುವ ಕಣ್ಣುಗಳನ್ನು ತದೇಕಚಿತ್ತದಿಂದ ನೋಡಿ ಶಿಲ್ಪಕಾರನ ಕಲಾ ನೈಪುಣ್ಯಕ್ಕೆ ತಲೆದೂಗಿದ್ದಾರೆ. ರಾಮ ಕೇವಲ ದೇವರಾಗಿರದೆ, ಜೀವ ತುಂಬಿರುವ ಒಂದು ಕಲಾಪ್ರಕಾರದಂತೆ ಕಂಡಿದ್ದು, ಮೂರ್ತಿಯನ್ನು ಕೆತ್ತಿದ ಅರುಣ್ ಯೋಗಿರಾಜ್ ಒಂದು ದಂತ ಕತೆಯಾಗಿ […]