ಮಂಗಳೂರಿನಿಂದ ಅಯೋಧ್ಯೆಗೆ ತೆರಳಲಿದೆ ಕೊಯಮತ್ತೂರು ಅಯೋಧ್ಯಾ ಧಾಮ್ ಆಸ್ತಾ ರೈಲು

ಮಂಗಳೂರು: ಮಂಗಳೂರು ನಗರದಿಂದ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಲು ವಿಶೇಷ ರೈಲು ಸೇವೆಯನ್ನು ನೀಡಲಾಗುತ್ತಿದೆ. ರೈಲು ಸಂಖ್ಯೆ 06517 ಕೊಯಮತ್ತೂರು-ದರ್ಶನ್ ನಗರ-ಕೊಯಮತ್ತೂರು ಆಸ್ತಾ, ಫೆಬ್ರವರಿ 8 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಹೊರಟು ಮಂಗಳೂರು ಜಂಕ್ಷನ್ ರೈಲು ನಿಲ್ದಾಣದ ಮೂಲಕ ಅಯೋಧ್ಯೆ ಜಂಕ್ಷನ್‌ಗೆ ಪ್ರಯಾಣಿಸಲಿದೆ. ಫೆಬ್ರವರಿ 8 ರಂದು ಸಂಜೆ 5:50 ಕ್ಕೆ ಮಂಗಳೂರು ಜಂಕ್ಷನ್‌ಗೆ ಆಗಮಿಸಿ 6 ಗಂಟೆಗೆ ಹೊರಡಲಿದೆ. ರೈಲು ಫೆಬ್ರವರಿ 11 ರಂದು ಮುಂಜಾನೆ ಅಯೋಧ್ಯೆಯ ದರ್ಶನ್ ನಗರ ರೈಲು ನಿಲ್ದಾಣಕ್ಕೆ ಆಗಮಿಸಲಿದೆ. ಫೆಬ್ರವರಿ […]

ಕರಾವಳಿ ಕರ್ನಾಟಕದಿಂದ ಅಯೋಧ್ಯೆಗೆ ನೇರ ರೈಲು ಸೌಲಭ್ಯ ಒದಗಿಸಲು ಸಂಸದ ದ್ವಯರ ಮನವಿ

ಮಂಗಳೂರು: ಜನವರಿ 22 ರಂದು ರಾಮಮಂದಿರ ಉದ್ಘಾಟನೆಗೆ ಅಯೋಧ್ಯಾ ನಗರಿ ಸಿದ್ಧವಾಗುತ್ತಿರುವ ಹಿನ್ನೆಲೆಯಲ್ಲಿ ಕರಾವಳಿ ಕರ್ನಾಟಕದಿಂದ ಅಯೋಧ್ಯೆಗೆ ನೇರ ರೈಲು ಸೌಲಭ್ಯವನ್ನು ಒದಗಿಸುವಂತೆ ಕೇಂದ್ರವನ್ನು ಸಂಸದರಾದ ನಳಿನ್ ಕುಮಾರ್ ಕಟೀಲ್ ಮತ್ತು ಶೋಭಾ ಕರಂದ್ಲಾಜೆ ಕೋರಿದ್ದಾರೆ. ಯಾತ್ರಾ ಕೇಂದ್ರಕ್ಕೆ ಭಕ್ತರ ಭೇಟಿಗೆ ಅನುಕೂಲವಾಗುವಂತೆ ಅಯೋಧ್ಯೆಗೆ ಸಾರ್ವಜನಿಕ ಸಾರಿಗೆ ಸಂಪರ್ಕ-ವಾಯು ಮತ್ತು ರೈಲು-ಸಂಪರ್ಕವನ್ನು ಕೇಂದ್ರ ಸರ್ಕಾರವು ಸಕ್ರಿಯವಾಗಿ ಪ್ರೋತ್ಸಾಹಿಸುತ್ತಿರುವುದರಿಂದ, ಸಂಸದರು ಇತ್ತೀಚೆಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಕರ್ನಾಟಕ ಕರಾವಳಿಯಿಂದಲೂ ಒಂದು ಸೇವೆಯನ್ನು ಮಂಜೂರು ಮಾಡುವಂತೆ ಪತ್ರ […]