ಆತ್ರಾಡಿ: ದ್ವಿಚಕ್ರ ವಾಹನ ಕಳ್ಳತನ; 2 ಗಂಟೆಯೊಳಗೆ ಆರೋಪಿ ಅಂದರ್.!

ಉಡುಪಿ: ತಾಲೂಕಿನ ಆತ್ರಾಡಿ ಕಾಂಪ್ಲೆಕ್ಸ್ ನ ಮಹಾದೇವಿ ಸ್ಟೋರ್ ನ ಎದುರಿನಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕದ್ದು ಪರಾರಿಯಾದ ಆರೋಪಿಯನ್ನು ಹಿರಿಯಡಕ ಪೊಲೀಸರು ಎರಡು ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಶಿವಮೊಗ್ಗ ಜಿಲ್ಲೆಯ ಶರಾವತಿ ನಗರದ ನಿವಾಸಿ 37 ವರ್ಷದ ಕುಮಾರ ಯಾನೆ ಟೈಲರ್ ಕುಮಾರ್ ಎಂದು ಗುರುತಿಸಲಾಗಿದೆ. ಆತ್ರಾಡಿ ಕಾಂಪ್ಲೆಕ್ಸ್ ನ ಮಹಾದೇವಿ ಸ್ಟೋರ್ ಮಾಲೀಕ ಪ್ರಸನ್ನ ಕುಮಾರ್ ಅವರು ಏ.3 ರಂದು ಸಂಜೆ 4.30ಕ್ಕೆ ಸ್ಟೋರ್ ಮುಂಭಾಗದಲ್ಲಿ ದ್ವಿಚಕ್ರ ನಿಲ್ಲಿಸಿ ವ್ಯಾಪಾರ ಮಾಡುತ್ತಿದ್ದರು. […]