ಅಮೇರಿಕಾದ ಒರೆಗಾನ್‌ನಲ್ಲಿ ಚೊಚ್ಚಲ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆದ ನೀರಜ್ ಚೋಪ್ರಾ
ಅಮೇರಿಕಾದ ಒರೆಗಾನ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಪುರುಷರ ಜಾವೆಲಿನ್ ಥ್ರೋ ನಲ್ಲಿ 88.39 ಮೀಟರ್‌ಗಳ ಎಸೆತದೊಂದಿಗೆ ಭಾರತ ನೀರಜ್ ಚೋಪ್ರಾ ಫೈನಲ್ ಗೆ ಅರ್ಹತೆ ಪಡೆದಿದ್ದಾರೆ. ಒಲಿಂಪಿಕ್ ಚಿನ್ನದ ಪದಕ ವಿಜೇತ ಚೋಪ್ರಾ, ಅರ್ಹತಾ ಸುತ್ತಿನ ಮೊದಲ ಎಸೆತದಲ್ಲೇ ಫೈನಲ್‌ನ ತಮ್ಮ ಸ್ಥಾನವನ್ನು ಭದ್ರಪಡಿಸಿದ್ದಾರೆ. ಅರ್ಹತಾ ಸುತ್ತಿನ ಎ ಗುಂಪಿನಲ್ಲಿ ಚೋಪ್ರಾ ಮೊದಲಿಗರಾಗಿ ಜಾವಲಿನ್ ಎಸೆದಿದ್ದಾರೆ. ನಾಳೆ ಮುಂಜಾನೆ ನಡೆಯಲಿರುವ ಫೈನಲ್‌ನಲ್ಲಿ 24 ವರ್ಷ ವಯಸ್ಸಿನ ಚೋಪ್ರಾ ಸ್ಪರ್ಧಿಸಲಿದ್ದಾರೆ. ನೀರಜ್ ಜೊತೆಗೆ ರೋಹಿತ್ ಯಾದವ್ ಕೂಡ […]
ಮಹಿಳೆಯರ 3000 ಮೀಟರ್ ಓಟ: ರಾಷ್ಟ್ರೀಯ ದಾಖಲೆ ಮುರಿದು ಹೊಸ ದಾಖಲೆ ನಿರ್ಮಿಸಿದ ಪಾರುಲ್ ಚೌಧರಿ
ನವದೆಹಲಿ: ಲಾಸ್ ಏಂಜಲೀಸ್‌ನ ಯುಎ ಸನ್‌ಸೆಟ್ ಟೂರ್‌ನಲ್ಲಿ 8:57.19 ಸೆಕೆಂಡ್ ಗಳಲ್ಲಿ ಓಟ ಮುಗಿಸಿ 6 ವರ್ಷಗಳ ಹಿಂದಿನ ರಾಷ್ಟ್ರೀಯ ದಾಖಲೆಯನ್ನು ಮುರಿದು ಹೊಸ ರಾಷ್ಟ್ರೀಯ ದಾಖಲೆಯನ್ನು ಸ್ಥಾಪಿಸಿದ್ದಕ್ಕಾಗಿ ಪಾರುಲ್ ಚೌಧರಿ ಅವರನ್ನು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅಭಿನಂದಿಸಿದ್ದಾರೆ. ಪಾರುಲ್ ಚೌಧರಿ ಅವರು ಮಹಿಳೆಯರ 3000 ಮೀಟರ್ ಓಟದಲ್ಲಿ 9 ನಿಮಿಷಕ್ಕಿಂತ ಕಡಿಮೆ ಸಮಯವನ್ನು ದಾಖಲಿಸಿದ ಮೊದಲ ಭಾರತೀಯ ಅಥ್ಲೀಟ್ ಎಂದು ಟ್ವೀಟ್‌ನಲ್ಲಿ ಠಾಕೂರ್ ಹೇಳಿದ್ದಾರೆ. ದೆಹಲಿಯಲ್ಲಿ ಆರು ವರ್ಷಗಳ […]
ರಾಷ್ಟ್ರೀಯ ಮುಕ್ತ ಮಾಸ್ಟರ್ಸ್ ಅಥ್ಲೆಟಿಕ್ಸ್: 100 ಮೀಟರ್ ರೇಸನ್ನು 45.40 ಸೆಕೆಂಡುಗಳಲ್ಲಿ ಓಡಿ ದಾಖಲೆ ನಿರ್ಮಿಸಿದ 105 ವರ್ಷದ ಸೂಪರ್ ಗ್ರ್ಯಾನಿ!!
ವಡೋದರಾ: ರಾಷ್ಟ್ರೀಯ ಓಪನ್ ಮಾಸ್ಟರ್ಸ್ ಅಥ್ಲೆಟಿಕ್ಸ್‌ನಲ್ಲಿ 105 ವರ್ಷದ ಸೂಪರ್ ಗ್ರ್ಯಾನಿ(ಅಜ್ಜಿ) 45.40 ಸೆಕೆಂಡುಗಳಲ್ಲಿ 100 ಮೀಟರ್ ಓಟವನ್ನು ಪೂರ್ಣಗೊಳಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಇದು ಈ ಚಾಂಪಿಯನ್‌ಶಿಪ್‌ನ ಉದ್ಘಾಟನಾ ಆವೃತ್ತಿಯಾಗಿದ್ದು, ಹರಿಯಾಣ ದಾದ್ರಿ ಜಿಲ್ಲೆಯ ರಾಮ್ ಬಾಯಿ ಎನ್ನುವ 105 ವರ್ಷ ವಯಸ್ಸಿನ ಅಜ್ಜಿಯೊಬ್ಬರು ಯಾರೂ ಊಹಿಸಲಾಗದ ದಾಖಲೆಯನ್ನು ನಿರ್ಮಿಸಿ ಸೂಪರ್ ಗ್ರ್ಯಾನಿ ಆಗಿ ಹೊರಹೊಮ್ಮಿದ್ದಾರೆ. ಒಂದು ದಾಖಲೆಯಿಂದ ತೃಪ್ತರಾಗದ ಸೂಪರ್ ಅಜ್ಜಿ ವಿದೇಶದಲ್ಲಿ ಸ್ಪರ್ಧಿಸುವ ಆಸೆ ಇದೆ ಎಂದು ಹೇಳಿಕೊಂಡಿದ್ದಾರೆ. “ಇದು ತುಂಬಾ ಸಂತೋಷ […]