ನಗರಸಭಾ ವ್ಯಾಪ್ತಿಯ ಕಟ್ಟಡಗಳ ಮಾಹಿತಿಯನ್ನು ಆಸ್ತಿ ಕಣಜ ತಂತ್ರಾಂಶದಲ್ಲಿ ದಾಖಲಿಸಿ

ಉಡುಪಿ ಉಡುಪಿ ನಗರಸಭಾ ವ್ಯಾಪ್ತಿಯ ಕಟ್ಟಡ ಮಾಲಿಕರು ಮತ್ತು ಅನುಭೋಗದಾರರು ಈಗಾಗಲೇ ಇ-ಖಾತೆ ಪಡೆದವರನ್ನು ಹೊರತುಪಡಿಸಿ, ಉಳಿದ ಕಟ್ಟಡಗಳನ್ನು ಗಣಿಕೀಕರಣ ಮಾಡಲು ಪೌರಾಡಳಿತ ನಿರ್ದೇಶನಾಲಯವು ಆಸ್ತಿ ಕಣಜ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು, ಸ್ಥಳೀಯ ಸಂಸ್ಥೆಯ ಎಲ್ಲಾ ಕಟ್ಟಡಗಳನ್ನು ಆನ್‌ಲೈನ್ ಮಾಡಬೇಕಾಗಿದ್ದು, ಆಸ್ತಿ ಕಣಜ ತಂತ್ರಾಂಶದಲ್ಲಿ ಈ ಕೆಳಗೆ ನಮೂದಿಸಲಾದ ದಾಖಲೆಗಳನ್ನು ಕಡ್ಡಾಯವಾಗಿ ದಾಖಲಿಸುವಂತೆ ನಗರಸಭೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ. ಕಟ್ಟಡವಾಗಿದ್ದಲ್ಲಿ: ಕಟ್ಟಡದ ಮಾಲೀಕರ ಭಾವಚಿತ್ರ ಮತ್ತು ಆಧಾರ್ ಹೊರತುಪಡಿಸಿ, ಒಂದು ಗುರುತಿನ ದಾಖಲೆ, ಮೊಬೈಲ್ ನಂಬರ್ ಮತ್ತು ಇ-ಮೇಲ್ […]