ಬಿಲ್ಲು ಸ್ಪರ್ಧೆಯಲ್ಲಿ ಬೆಳ್ಳಿ; ಬ್ಯಾಡ್ಮಿಂಟನ್​, ಕುಸ್ತಿ, ಕಿಕ್​ ವಾಲಿಬಾಲ್​ನಲ್ಲಿ ಕಂಚು: ಏಷ್ಯನ್​ ಗೇಮ್ಸ್

ಹ್ಯಾಂಗ್​ಝೌ (ಚೀನಾ): ಇಲ್ಲಿ ನಡೆಯುತ್ತಿರುವ ಏಷ್ಯನ್​ ಗೇಮ್ಸ್​ನ 13ನೇ ದಿನವಾದ ಶುಕ್ರವಾರ  ಭಾರತದ ಪದಕ ಬೇಟೆ ಮುಂದುವರೆದಿದೆ. 19ನೇ ಏಷ್ಯಾಡ್​ನಲ್ಲಿ ಭಾರತ ಪ್ರಸ್ತುತ 21 ಚಿನ್ನ, 33 ಬೆಳ್ಳಿ ಮತ್ತು 37 ಕಂಚಿನಿಂದ 91 ಪದಕಗಳನ್ನು ಗೆದ್ದುಕೊಂಡಿದೆ. 2018ರಲ್ಲಿ 70 ಪದಕ ಗೆದ್ದಿರುವುದು ದಾಖಲೆಯಾಗಿತ್ತು. ಪ್ರಸ್ತುತ ಕೂಟದ ಪದಕ ಪಟ್ಟಿಯಲ್ಲಿ ಭಾರತ 4ನೇ ಸ್ಥಾನದಲ್ಲಿದ್ದರೆ, ಚೀನಾ, ಜಪಾನ್​, ದಕ್ಷಿಣ ಕೊರಿಯಾ ಕ್ರಮವಾಗಿ 1,2,3 ನೇ ಸ್ಥಾನ ಅಲಂಕರಿಸಿವೆ.ಬಾಂಗ್ಲಾದೇಶವನ್ನು ಮಣಿಸಿ ಫೈನಲ್​ ಪ್ರವೇಶಿಸಿದ್ದ ಭಾರತದ ಪುರುಷರ ರಿಕರ್ವ್ ತಂಡ […]