ಏಷ್ಯಾಕಪ್ ವೇಳಾಪಟ್ಟಿ : ಬಿಸಿಸಿಐ ಕಾರ್ಯದರ್ಶಿ ಮತ್ತು ಪಿಸಿಬಿ ಅಧ್ಯಕ್ಷರಿಂದ ಅಂತಿಮ

ನವದೆಹಲಿ :ಈ ಬಾರಿ ಏಷ್ಯಾಕಪ್​ ಆತಿಥ್ಯವನ್ನು ಪಾಕಿಸ್ತಾನ ವಹಿಸಿದ್ದು, ಭದ್ರತಾ ನೆಪವೊಡ್ಡಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣ ಮಾಡಲು ನಿರಾಕರಿಸಿತ್ತು. ಬಳಿಕ ನಡೆದ ಚರ್ಚೆಗಳಲ್ಲಿ ಪಾಕಿಸ್ತಾನ ಕ್ರಿಕೆಟ್​ ಬೋರ್ಡ್ (ಪಿಸಿಬಿ) ​ತೆಗೆದುಕೊಂಡ ಪಂದ್ಯಗಳ ವಿತರಣಾ ಒಪ್ಪಿಗೆಯಂತೆ ಇಂಡೋ ಮತ್ತು ಪಾಕ್​ ನಡುವಣ ಬಹು ನಿರೀಕ್ಷಿತ ಏಷ್ಯಾಕಪ್ ಪಂದ್ಯ ಶ್ರೀಲಂಕಾದಲ್ಲಿ ನಡೆಯಲಿದೆ ಎಂದು ಐಪಿಎಲ್ ಅಧ್ಯಕ್ಷ ಅರುಣ್ ಸಿಂಗ್​ ಧುಮಾಲ್ ಬುಧವಾರ ಖಚಿತಪಡಿಸಿದ್ದಾರೆ. ಏಷ್ಯಾಕಪ್​ ​ಪಂದ್ಯಗಳನ್ನು ಆಯೋಜಿಸಲು ರಾಷ್ಟ್ರಗಳು ನಿಗದಿಯಾಗಿದ್ದರೂ ಗೊಂದಲಗಳು ಮಾತ್ರ ಮುಗಿದಿಲ್ಲ. ಏಷ್ಯಾಕಪ್ ವೇಳಾಪಟ್ಟಿಯನ್ನು ಬಿಸಿಸಿಐ […]