ಪಾಕ್​ – ಭಾರತ ಪಂದ್ಯಕ್ಕೆ ಮತ್ತೆ ಕಾಡಿದ ವರುಣ.. ಮಳೆಗೂ ಮುಂಚೆ ಭಾರತ 147/2

ಕೊಲಂಬೊ (ಶ್ರೀಲಂಕಾ): ನೀಲಾಕಾಶದ ಅಡಿಯಲ್ಲಿ ಆರಂಭವಾದ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಒಮ್ಮೆಗೆ ಮಳೆ ಕಾಡಿದೆ. 25ನೇ ಓವರ್​ ವೇಳೆ ಜೋರಾಗಿ ಆರಂಭವಾದ ಮಳೆ ಸುಮಾರು ಎರಡು ಗಂಟೆಗಳ ಕಾಲ ಎಡೆಬಿಡಲದೇ ಸುರಿದಿದೆ. ವಾರದ ಹಿಂದೆ ನಡೆದ ಲೀಗ್ ಹಂತದ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿತ್ತು. ಈಗ ಸೂಪರ್​ ಫೋರ್​ ಹಂತದ ಪಂದ್ಯಕ್ಕೂ ವರುಣ ಅಡ್ಡಿಯಾಗಿದ್ದಾನೆ.​ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗಿಳಿದ ಭಾರತ ಉತ್ತಮ ಆರಂಭವನ್ನು ಪಡೆದುಕೊಂಡಿತ್ತು. ಏಷ್ಯಾಕಪ್​ನ ಲೀಗ್​ ಹಂತದ ಪಂದ್ಯದಲ್ಲಿ ಪಾಕ್​ ಬೌಲರ್​​ಗಳಿಗೆ ನಲುಗಿದ್ದ ಗಿಲ್ […]