ಕೋವಿಡ್ 19 ಆರ್‌ ಟಿಪಿಸಿಆರ್ ಪರೀಕ್ಷೆ ದರ ಕಡಿತ: ಕೋವಿಡ್ ಕಾರ್ಯಪಡೆ ಸಭೆಯಲ್ಲಿ ಸರಕಾರದ ಮಹತ್ವದ ನಿರ್ಧಾರ

ಬೆಂಗಳೂರು: ಕೋವಿಡ್ 19ಗೆ ಸಂಬಂಧಿಸಿದಂತೆ ಸರಕಾರಿ ಆಸ್ಪತ್ರೆಗಳಿಂದ ಖಾಸಗಿ ಲ್ಯಾಬ್‌ಗಳಿಗೆ ರೆಫರ್ ಮಾಡುವ ಸೋಂಕಿತರ ಆರ್‌ಟಿಪಿಸಿಆರ್ ಪರೀಕ್ಷೆ ದರವನ್ನು 2000 ದಿಂದ 1,500 ರೂಪಾಯಿಗೆ ಇಳಿಸಲಾಗಿದೆ. ಅದೇ ರೀತಿ ನೇರವಾಗಿ ಖಾಸಗಿ ಲ್ಯಾಬ್‌ಗಳಿಗೇ ತೆರಳಿ ಈ ಪರೀಕ್ಷೆ ನಡೆಸಿದರೆ ಅಲ್ಲಿ ವಿಧಿಸಲಾಗುತ್ತಿದ್ದ ದರವನ್ನು 3,000ದಿಂದ 2,500 ರೂ.ಗಳಿಗೆ ಇಳಿಸಲಾಗಿದೆ ಎಂದು  ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಕೋವಿಡ್ ಕಾರ್ಯಪಡೆ ಸಭೆಯಲ್ಲಿ ನಡೆದ ನಿರ್ಧಾರಗಳ ಕುರಿತು ಅವರು ಮಾಹಿತಿ ನೀಡಿದ್ದು, ಈ ದರ […]