ಬಾಬರಿ ನಂತರ ಮತ್ತೊಂದು ಮಸೀದಿಯನ್ನು ಕಳೆದುಕೊಳ್ಳಲು ಮುಸ್ಲಿಮರು ತಯಾರಿಲ್ಲ: ಅಸಾದುದ್ದೀನ್ ಓವೈಸಿ

ವಾರಣಾಸಿ: ಬಾಬರಿ ಮಸೀದಿಯ ನಂತರ ಮತ್ತೊಂದು ಮಸೀದಿಯನ್ನು ಕಳೆದುಕೊಳ್ಳಲು ಮುಸ್ಲಿಮರು ತಯಾರಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸೋಮವಾರ ಹೇಳಿದ್ದಾರೆ. ನ್ಯಾಯಾಲಯದ ಆದೇಶದನ್ವಯ ವಾರಣಾಸಿಯ ಜ್ಞಾನವಾಪಿ ಸಂಕೀರ್ಣದ ಸಮೀಕ್ಷೆಯ ಸಮಯದಲ್ಲಿ ಶಿವಲಿಂಗ ಕಂಡುಬಂದಿದೆ ಎಂದು ಹೇಳಲಾಗಿರುವ ಬಳಿಕ ಅವರು ಪ್ರತಿಕ್ರಿಯಿಸಿದ್ದಾರೆ. ಬಾಬರಿ ಮಸೀದಿ ಧ್ವಂಸ ಮತ್ತು 1949 ರಲ್ಲಿ ಹಿಂದೂ ದೇವತೆಗಳ ವಿಗ್ರಹಗಳು ಕಾಣಿಸಿಕೊಂಡಾಗ ನಡೆದ ಘಟನೆಯನ್ನು ಉಲ್ಲೇಖಿಸಿದ ಓವೈಸಿ, ವಾರಣಾಸಿಯಲ್ಲಿ ಅದನ್ನು ಪುನರಾವರ್ತಿಸಲು ಬಿಡುವುದಿಲ್ಲ ಎಂದು ಮುಸ್ಲಿಮರು ಪ್ರತಿಜ್ಞೆ ಮಾಡಬೇಕೆಂದಿದ್ದಾರೆ. ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ […]