ಎಪಿಎಂಸಿ ರಕ್ಷಣಾ ಸಮಿತಿ ವತಿಯಿಂದ ನ.29 ರಿಂದ ಅಹೋರಾತ್ರಿ ಧರಣಿ: ಭ್ರಷ್ಟ ಅಧಿಕಾರಿಗಳ ಅಮಾನತಿಗೆ ಪಟ್ಟು

ಉಡುಪಿ: ಉಡುಪಿ ಎಪಿಎಂಸಿ ಅಧಿಕಾರಿಗಳ ಅವ್ಯವಹಾರ ಮತ್ತು ಭ್ರಷ್ಟಾಚಾರದ ವಿರುದ್ದ ಹಗಲು ರಾತ್ರಿ ಧರಣಿಯನ್ನು ಎಪಿಎಂಸಿ ಪ್ರಾಂಗಣದ ಎದುರು ನ.29 ರಿಂದ ಕೈಗೊಳ್ಳಲಾಗುವುದು ಎಂದು ಎಪಿಎಂಸಿ ರಕ್ಷಣಾ ಸಮಿತಿ ನಿರ್ಧರಿಸಿದೆ. ಲಂಚ ಪಡೆದ ಅಧಿಕಾರಿಗಳನ್ನು ಅಮಾನತು ಮಾಡುವುದು, ಕ್ಯಾನ್ಸರ್ ಪೀಡಿತ ವರ್ತಕನಿಂದ ಲೈಸನ್ಸ್ ಗಾಗಿ ಲಂಚ ಪಡೆದಿರುವವರನ್ನು ಅಮಾನತುಗೊಳಿಸುವುದು, ಅದಾಗಲೇ ಮೃತರಾಗಿರುವ ವ್ಯಕ್ತಿಯ ಹೆಸರಿನಲ್ಲೇ ಗೋಡೌನ್ ಬಾಡಿಗೆ ಪಡೆಯುವುದು, ಮೂಲಭೂತ ಸೌಕರ್ಯದ ಕೊರತೆ ಹಾಗೂ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿರುವ ಭ್ರಷ್ಟರ ಅಮಾನತು ಮುಂತಾದ ಬೇಡಿಕೆಗಳನ್ನು […]