ಅನುಷ್ಕಾ ನಟನೆಯ ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ

ನಿರ್ದೇಶಕ ಮಹೇಶ್ ಬಾಬು ಪಿ ಅವರ ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಎಂಬ ಚಿತ್ರಕ್ಕಾಗಿ ನಟಿ ಅನುಷ್ಕಾ ಶೆಟ್ಟಿ ಮತ್ತು ನಟ ನವೀನ್ ಪೋಲಿಶೆಟ್ಟಿ ಜೊತೆಯಾಗಿದ್ದಾರೆ. ಚಿತ್ರದ ಮೊದಲ ಪೋಸ್ಟರ್ ಅನ್ನು ಬುಧವಾರ ಅನಾವರಣಗೊಳಿಸಲಾಗಿದ್ದು, ಸಮಕಾಲೀನ ಪ್ರೇಮಕಥೆಯ ಕಥಾಹಂದರದ ತುಣುಕನ್ನು ನೀಡುತ್ತದೆ. ಪೋಸ್ಟರ್ ಇಬ್ಬರು ವ್ಯಕ್ತಿಗಳ ಕೊಲಾಜ್ ಅನ್ನು ತೋರಿಸುತ್ತಿದ್ದು, ಇಬ್ಬರೂ ತಮ್ಮ ಜೀವನದ ವಿಭಿನ್ನ ಹಂತದಲ್ಲಿದ್ದಾರೆ ಎಂದು ತೋರುತ್ತದೆ. ಅನುಷ್ಕಾ ಲಂಡನ್‌ನಲ್ಲಿ ವಾಸಿಸುತ್ತಿದ್ದು, ‘ಹ್ಯಾಪಿ ಸಿಂಗಲ್’ ಎಂದು ಬರೆದಿರುವ ಪುಸ್ತಕ ಕೈಯಲ್ಲಿದ್ದರೆ, ಹೈದರಾಬಾದ್‌ ಹುಡುಗನ ಪಾತ್ರದಲ್ಲಿರುವ […]

ಭಾರತೀಯ ಚಿತ್ರರಂಗದ ಮಹಿಳಾ ಸೂಪರ್ ಸ್ಟಾರ್ ಬಾಹುಬಲಿಯ ದೇವಸೇನೆಗೆ ಹುಟ್ಟುಹಬ್ಬದ ಸಂಭ್ರಮ

ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟಿ, ಮಹಿಳಾ ಸೂಪರ್ ಸ್ಟಾರ್ ಎಂದೇ ಕರೆಯಲ್ಪಡುವ ಬಾಹುಬಲಿಯ ದೇವಸೇನೆ ಪಾತ್ರಧಾರಿ ಅನುಷ್ಕಾ ಶೆಟ್ಟಿಗೆ ಇಂದು 41 ನೇ ಹುಟ್ಟುಹಬ್ಬದ ಸಂಭ್ರಮ. ಅತಿ ಹೆಚ್ಚು ಸಂಭಾವನೆ ಪಡೆಯುವ ದಕ್ಷಿಣ ಭಾರತದ ನಟಿಯರಲ್ಲಿ ಒಬ್ಬರಾಗಿರುವ ಅನುಷ್ಕಾ ಪ್ರತಿ ಚಲನಚಿತ್ರಕ್ಕೆ 2 ರಿಂದ 3 ಕೋಟಿ ರೂ ಸಂಭಾವನೆ ಪಡೆಯುತ್ತಾರೆ ಎನ್ನಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಳ್ಳಿಪಾಡಿ ಗ್ರಾಮದ ತುಳುವ ಬಂಟ ಕುಟುಂಬದ ಪ್ರಫುಲ್ಲ ಶೆಟ್ಟಿ ಮತ್ತು ಎ.ಎನ್.ವಿಟ್ಟಲ್ ಶೆಟ್ಟಿಯವರ ಮೂರು ಮಕ್ಕಳಲ್ಲಿ […]

ಕಾಂತಾರ ಕಂಡು ಮೆಚ್ಚಿದ ಕರಾವಳಿ ಬೆಡಗಿಯರು: ಅನುಷ್ಕಾ, ಶಿಲ್ಪಾ ಶೆಟ್ಟಿ ಯಿಂದ ರಿಷಭ್ ಗುಣಗಾನ

ಕರಾವಳಿಯ ಬೆಡಗಿಯರಾದ ಅನುಷ್ಕಾ ಶೆಟ್ಟಿ ಮತ್ತು ಶಿಲ್ಪಾ ಶೆಟ್ಟಿ ಕಾಂತಾರ ಸಿನಿಮಾ ನೋಡಿ ರಿಷಬ್ ಶೆಟ್ಟಿ ಮತ್ತು ಸಂಪೂರ್ಣ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ. ಮೂಲತಃ ಪುತ್ತೂರಿನ ಬೆಳ್ಳಿಪಾಡಿಯವರಾದ ಅನುಷ್ಕಾ ಶೆಟ್ಟಿ ಕಾಂತಾರ ಸಿನಿಮಾ ನೋಡಿ ಚಿತ್ರವನ್ನು ಸಂಪೂರ್ಣವಾಗಿ ಮೆಚ್ಚಿಕೊಂಡಿದ್ದೇನೆ. ರಿಷಭ್ ಮತ್ತು ಸಮಸ್ತ ಕಾಂತಾರ ತಂಡಕ್ಕೆ ಶುಭಾಶಯ ಎಂದಿದ್ದಾರೆ. ನಿಡ್ಡೋಡಿಯ ಮುದಲಾಡಿಯವರಾದ ಶಿಲ್ಪಾ ಶೆಟ್ಟಿ ಕೂಡಾ ಕಾಂತಾರ ಸಿನಿಮಾ ವೀಕ್ಷಿಸಿ, ಎಂತಹ ನಿರೂಪಣೆ, ಭಾವನೆ, ಕಂಪನ ಮತ್ತು ಜಗತ್ತು. ಕ್ಲೈಮ್ಯಾಕ್ಸ್ ಸಮಯದಲ್ಲಿ ಮೈರೋಮಾಂಚನಗೊಂಡಿತ್ತು. ಸಿನಿಮಾದ ಶಕ್ತಿಯು […]