ಅನುಪಮಾ ಧಾರಾವಾಹಿ ನಟ ರಿತುರಾಜ್ ಸಿಂಗ್ ಹೃದಯಾಘಾತದಿಂದ ನಿಧನ
ಮುಂಬೈ: ಅನುಪಮಾ ಧಾರವಾಹಿಯ ಜನಪ್ರಿಯ ಟಿವಿ ನಟ ರಿತುರಾಜ್ ಸಿಂಗ್ ಫೆಬ್ರವರಿ 20 ರ ಮುಂಜಾನೆ 59 ನೇ ವಯಸ್ಸಿನಲ್ಲಿ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಅವರ ಸಹೋದ್ಯೋಗಿ ಮತ್ತು ಆತ್ಮೀಯ ಸ್ನೇಹಿತ ಅಮಿತ್ ಬೆಹ್ಲ್ ದುಃಖದ ಸುದ್ದಿಯನ್ನು ಖಚಿತಪಡಿಸಿದ್ದಾರೆ. ನಟ ಅಮಿತ್ ಬೆಹ್ಲ್, ರಿತುರಾಜ್ ಸಿಂಗ್ ಅವರ ಉತ್ತಮ ಸ್ನೇಹಿತರಾಗಿದ್ದು ಸುದ್ದಿಯನ್ನು ದೃಢಪಡಿಸಿದ್ದಾರೆ. ಫೆಬ್ರವರಿ 20 ರಂದು ಬೆಳಿಗ್ಗೆ12:30 ಕ್ಕೆ ರಿತುರಾಜ್ ಹೃದಯಾಘಾತ ಹೊಂದಿದ್ದಾರೆ. ರಿತುರಾಜ್ ಮೇದೋಜ್ಜೀರಕ ಗ್ರಂಥಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು […]