ಕಿನ್ನಿಮುಲ್ಕಿ ಶ್ರೀ ವೀರಭದ್ರ ದೇವಸ್ಥಾನದ ವಾರ್ಷಿಕ ಮಹೋತ್ಸವ ಸಂಪನ್ನ

ಉಡುಪಿ: ಕಿನ್ನಿಮುಲ್ಕಿ ಶ್ರೀ ವೀರಭದ್ರ ದೇವಸ್ಥಾನದ ವಾರ್ಷಿಕ ಮಹೋತ್ಸವವು ಸನ್ನಿಧಾನದಲ್ಲಿ ವಿಜೃಂಭಣೆಯಿಂದ ನಡೆಯಿತು. ಬ್ರಹ್ಮಶ್ರೀ ವೇದಮೂರ್ತಿ ಕೊಯ್ಯೂರು ನಂದಕುಮಾರ ತಂತ್ರಿಗಳ ನೇತೃತ್ವದಲ್ಲಿ ಪ್ರಧಾನ ಅರ್ಚಕರಾದ ವಾದಿರಾಜ ಭಟ್ ಉಪಸ್ಥಿತಿಯಲ್ಲಿ ಉತ್ಸವ ಜರಗಿತು. ಶ್ರೀ ದೇವರಿಗೆ ಕಲಶಾಭಿಷೇಕ, ಮಹಾ ರಂಗಪೂಜೆ ರಾತ್ರಿ ಶ್ರೀ ವೀರಭದ್ರ ದೇವರ ಪುಷ್ಪ ರಥೋತ್ಸವ, ಪದ್ಮಶಾಲಿ ತರುಣ ವೃಂದದ ಸದಸ್ಯರಿಂದ ತುಳಸಿ ಸಂಕೀರ್ತನೆ, ಧರ್ಮ ದೈವಗಳ ಆರಾಧನೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪದ್ಮಶಾಲಿ ತರುಣ ವೃಂದದ ಸದಸ್ಯರಿಂದ ಪಿರ ಬರುವೊಲಾ ತುಳು ನಾಟಕ […]