ಕಿನ್ನಿಗೋಳಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ ಹಾಗೂ ಶ್ರೀ ಕಾಳಿಕಾಂಬಾ ಮಹಿಳಾ ವೃಂದದ ವಾರ್ಷಿಕೋತ್ಸವ ಸಮಾರಂಭ
ಕಿನ್ನಿಗೋಳಿ: ನಾವು ಹಿಂದೂಗಳಾಗಿ ಒಗ್ಗಟ್ಟಾದಾಗ ಮಾತ್ರ ಸಶಕ್ತ ಸಮಾಜದ ಏಳಿಗೆ ಸಾಧ್ಯ. ನಮ್ಮೊಳಗಿನ ಜಾತಿ – ಪಂಗಂಡಗಳು ಸಾಮೂಹಿಕ ಪ್ರಗತಿಗೆ ತೊಡಕಾಗಬಾರದು ಎಂದು ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಳದ ಅರ್ಚಕ ಅನಂತ ಪದ್ಮನಾಭ ಅಸ್ರಣ್ಣ ಹೇಳಿದರು. ಅವರು ಕಿನ್ನಿಗೋಳಿ ರಾಜರತ್ನಪುರ ಸರಾಫ್ ಅಣ್ಣಯ್ಯಾಚಾರ್ಯ ಸಭಾ ಭವನದಲ್ಲಿ ಕಿನ್ನಿಗೋಳಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ ಹಾಗೂ ಶ್ರೀ ಕಾಳಿಕಾಂಬಾ ಮಹಿಳಾ ವೃಂದದ ವಾರ್ಷಿಕೋತ್ಸವ ಸಮಾರಂಭದಲ್ಲಿ ಶುಭಾಶಂಸನೆ ನೀಡಿ ಮಾತನಾಡಿದರು. ಆನೆಗುಂದಿ ವೇದ ಪಾಠಶಾಲೆಯ ಪವನ್ ಶರ್ಮ್ ಅನುಗ್ರಹ […]