ಮೇ 3 ರಂದು ಸಾರಿಗೆ ಕೆ.ಎಸ್.ಆರ್.ಟಿಸಿ ಬಸ್ ಕಾರ್ಯಾಚರಣೆಯಲ್ಲಿ ವ್ಯತ್ಯಯ

ಉಡುಪಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗದ ಬಸ್‌ಗಳನ್ನು ಸಾಂದರ್ಭಿಕ ಒಪ್ಪಂದದ ಮೇರೆಗೆ ಮೇ 3 ರಂದು ಅಂಕೋಲದ ಹಟ್ಟಿಕೇರಿಯಲ್ಲಿ ನಡೆಯುವ ಪ್ರಧಾನಮಂತ್ರಿಗಳ ಕಾರ್ಯಕ್ರಮಕ್ಕೆ ನಿಯೋಜಿಸಲಾಗಿರುವುದರಿಂದ, ಸದ್ರಿ ದಿನದಂದು ಮಂಗಳೂರು ವಿಭಾಗ ವ್ಯಾಪ್ತಿಯ ಉಡುಪಿ, ಕಾರ್ಕಳ, ಕುಂದಾಪುರ, ಸಿದ್ಧಾಪುರ, ಬೈಂದೂರು ಹಾಗೂ ಭಟ್ಕಳ ವಲಯ ಸಾರಿಗೆ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಪ್ರಯಾಣಿಕರು ಕ.ರಾ.ರ.ಸಾ.ನಿಗಮದೊಂದಿಗೆ ಸಹಕರಿಸುವಂತೆ ನಿಗಮದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂಕೋಲಾದಲ್ಲಿ ಕೊಚ್ಚಿ ಹೋದ ಸೇತುವೆ, ಸಂಪಾಜೆಯಲ್ಲಿ ಶಾಲೆ ಮೇಲೆ ಗುಡ್ಡ ಕುಸಿತ

ಕೊಡಗು: ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಎಡೆ ಬಿಡದೆ ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ಗುಡ್ಡ ಕುಸಿತ, ಕೃತಕ ನೆರೆ, ಮನೆಗಳೌ ಜಲಾವೃತವಾಗುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಕೊಡಗು ಜಿಲ್ಲೆಯ ಸಂಪಾಜೆ ಗ್ರಾಮದ ಕೊಯನಾಡು ಪ್ರಾಥಮಿಕ ಶಾಲೆಯ ಹಿಂಬದಿಯಲ್ಲಿ ಗುಡ್ಡ ಕುಸಿದಿದ್ದರೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಗುಳ್ಳಾಪುರದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ ಸೇತುವೆ ಆರಂಭಿಕ ಮಳೆಗೆ ಕೊಚ್ಚಿ ಹೋಗಿದೆ. https://twitter.com/i/status/1546072884379979777 ಕೃಪೆ: ಕರ್ನಾಟಕ ರೈನ್ಸ್