ಮೂಡುಪೆರಂಪಳ್ಳಿ ವಾರ್ಡ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅನಿಟಾ ಬೆಲಿಂಡ ಡಿಸೋಜಾಗೆ ಒಲಿದ ವಿಜಯಲಕ್ಷ್ಮಿ

ಉಡುಪಿ: ಉಡುಪಿ ನಗರಸಭೆಯ ಮೂಡುಪೆರಂಪಳ್ಳಿ ವಾರ್ಡಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅನಿಟಾ ಬೆಲಿಂಡ ಡಿಸೋಜಾ ಆರು ಮತಗಳಿಂದ ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶ್ರುತಿ ಪರಾಭವಗೊಂಡಿದ್ದಾರೆ. ಕಾಂಗ್ರೆಸ್ ಸದಸ್ಯೆ ಸೆಲಿನಾ ಕರ್ಕಡಾ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆದಿತ್ತು. ಅನಿತಾ ಬೆಲಿಂಡಾ ಡಿಸೋಜಾ 6 ಮತಗಳ ಅಂತರದಲ್ಲಿ ಜಯಗಳಿಸುವುದರ ಮೂಲಕ 10 ವರ್ಷಗಳ ಬಳಿಕ ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಮೂಡುಪೆರಂಪಳ್ಳಿ ವಾರ್ಡ್ ಬಿಜೆಪಿ ಮಡಿಲಿಗೆ ವರ್ಗವಾಗಿದೆ.