ಪೇಜಾವರ ಶ್ರೀಗಳಿಗೆ ಅರಳುಮರಳು: ದಿನೇಶ್ ಅಮೀನ್ ಮಟ್ಟು

  ಉಡುಪಿ: ಪೇಜಾವರ ಸ್ವಾಮೀಜಿಗೆ ಅರಳುಮರಳು. ಅವರು ಕ್ಷಣಕೊಂದು ಮಾತನಾಡುತ್ತಾರೆ. ಹಾಗಾಗಿ ಅವರ ಮಾತುಗಳನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಚಿಂತಕ ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ. ಉಡುಪಿ ಅಂಬೇಡ್ಕರ್ ಯುವಸೇನೆಯ ವತಿಯಿಂದ ಭಾನುವಾರ ಬನ್ನಂಜೆ ನಾರಾಯಣಗುರು ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಅಂಬೇಡ್ಕರ್ ಯುವಜನೋತ್ಸವವನ್ನು ಸೇನೆಯ ಲಾಂಛನ ಬಿಡುಗಡೆಗೊಳಿಸುವ ಮೂಲಕ ಉದ್ಘಾಟಿಸಿ  ಮಾತನಾಡಿದ ಅವರು, ಪೇಜಾವರ ಶ್ರೀಗಳು ರಾಮಮಂದಿರ ಕಟ್ಟುವ ಹೇಳಿಕೆಯನ್ನಾದರೂ ನೀಡಲಿ, ಸಂವಿಧಾನ ಬದಲಾವಣೆ ಹೇಳಿಕೆಯನ್ನಾದರೂ ನೀಡಲಿ, ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ. ಆದರೆ, ದೇಶದ ಪ್ರಧಾನಿ ಅಥವಾ […]