ಅಮೆರಿಕ ಕಿಡ್ಸ್ ವರ್ಲ್ಡ್ ಚಾಂಪಿಯನ್ಸ್‌ನ ಟಾಪ್ -5 ರಲ್ಲಿ ಮೂವರು ಭಾರತೀಯರು: ಗಾಲ್ಫ್​ನಲ್ಲಿ ನಿಹಾಲ್ ಚೀಮಾ ದ್ವಿತೀಯ

ಪೈನ್‌ಹರ್ಸ್ಟ್ (ಅಮೆರಿಕ): ಅಮೆರಿಕದಲ್ಲಿ ನಡೆಯುತ್ತಿರುವ 6 ರಿಂದ 12 ವರ್ಷ ವಯಸ್ಸಿನ ಬಾಲಕ – ಬಾಲಕಿಯರ ವಿಶ್ವಚಾಂಪಿಯನ್‌ ಶಿಪ್‌ನಲ್ಲಿ ಭಾರತೀಯ ಮೂವರು ಪುಟ್ಟ ಕ್ರೀಡಾ ಪಟುಗಳು ಟಾಪ್​-5 ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇದರಲ್ಲಿ 6 ವರ್ಷದೊಳಗಿನ ಬಾಲಕರ ವಿಭಾಗದ ಗಾಲ್ಫ್ ಆಟದಲ್ಲಿ ನಿಹಾಲ್ ಚೀಮಾ ದ್ವಿತೀಯ ಸ್ಥಾನ ಪಡೆದು ಮಿಂಚಿದ್ದಾನೆ. ಇನ್ನು ಕಬೀರ್ ಗೋಯಲ್ 4 ನೇ ಸ್ಥಾನ ಪಡೆದುಕೊಂಡಿದ್ದರೆ, ಓಜಸ್ವಿನಿ ಸಾರಸ್ವತ್ ಎಂಬ ಬಾಲಕಿ, ಬಾಲಕಿಯರ ವಿಭಾಗದಲ್ಲಿ ಐದನೇ ಸ್ಥಾನ ಗಿಟ್ಟಿಸಿಕೊಂಡು ದೇಶಕ್ಕೆ ಹೆಮ್ಮೆ ತಂದಿದ್ದಾರೆ. […]