ಅಂಬಾತನಯ ಮುದ್ರಾಡಿ ಸಾಹಿತ್ಯದ ಮೂಲಕ ಜೀವಂತ: ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ

ಉಡುಪಿ: ಅಂಬಾತನಯ ಮುದ್ರಾಡಿ ಅವರ ಜೀವನ ಸಾಧನೆ ಮಾದರಿಯಾಗಿದ್ದು, ಅವರೀಗ ನಮ್ಮ ನಡುವೆ ಇಲ್ಲದಿದ್ದರೂ ಅವರ ಕೃತಿ, ಮಾತು, ಭಾಷಾ ಸಾಹಿತ್ಯದಿಂದ ಜೀವಂತವಿದ್ದಾರೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಮುದ್ರಾಡಿ ಶಾಲಾ ವಠಾರದಲ್ಲಿ ಶನಿವಾರ ಪ್ರಸಿದ್ಧ ಸಾಹಿತಿ, ಹರಿದಾಸ, ಅರ್ಥಧಾರಿ, ಪ್ರವಚನಕಾರ, ಚಿಂತಕ ಅಂಬಾತನಯ ಮುದ್ರಾಡಿಯವರ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇವಿಯ ಆರಾಧಕರಾಗಿ ಅಂಬಾತನಯ ಎಂಬ ಕಾವ್ಯ ನಾಮದಿಂದ ರಾಜ್ಯಾದ್ಯಂತ ಪ್ರಸಿದ್ಧಿ ಪಡೆದು, […]