ಮೂಡಬಿದ್ರೆ: ಆಳ್ವಾಸ್‌ ಪ್ರಗತಿ -2019 ಕ್ಕೆ ಚಾಲನೆ

ಮೂಡಬಿದ್ರೆ: ಪ್ರತಿಯೊಬ್ಬರೂ ತಮ್ಮೊಳಗಿನ ಪ್ರತಿಭೆ ಏನೆಂಬುದನ್ನು ತಾವು ಮೊದಲು ತಿಳಿದುಕೊಂಡು ಅದಕ್ಕೆ ತಕ್ಕ ಉದ್ಯೋಗ ರಂಗವನ್ನು ಪ್ರವೇಶಿಸಿ ಮುಂದುವರಿದಾಗ ಪ್ರಗತಿ ಹೊಂದಲು ಸಾಧ್ಯ ಎಂದು ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ| ಸಚ್ಚಿದಾನಂದ ಹೇಳಿದರು. ಅವರು ಆಳ್ವಾಸ್‌ ಎಜುಕೇಶನ್‌ ಫೌಂಡೇ ಶನ್‌ ಆಶ್ರಯದಲ್ಲಿ ವಿದ್ಯಾಗಿರಿಯಲ್ಲಿ ಆಯೋಜಿಸಲಾದ 11ನೇ ವರ್ಷದ ಆಳ್ವಾಸ್‌ ಪ್ರಗತಿ-2019 ಉದ್ಯೋಗ ಮೇಳವನ್ನು ಡಾ| ವಿ.ಎಸ್‌. ಆಚಾರ್ಯಸಭಾಂಗಣದಲ್ಲಿ ನಡೆದ ಸಮಾರಂಭ ದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಭಾರತೀಯ ಅಭ್ಯರ್ಥಿಗಳಿಗೆ ಚೀನ, ಅಮೆರಿಕ, ಮಧ್ಯಪ್ರಾಚ್ಯ […]