ರತ್ನವರ್ಮ ಹೆಗ್ಗಡೆ ನಾಟಕ ಪ್ರಶಸ್ತಿಗೆ ಅಕ್ಷತಾರಾಜ್ ಪೆರ್ಲ ಆಯ್ಕೆ

ಮಂಗಳೂರು: ರತ್ನವರ್ಮ ಹೆಗ್ಗಡೆ ತುಳು ನಾಟಕ ಸ್ಪರ್ಧೆಯ 2019ನೇ ಸಾಲಿನ ಪ್ರಶಸ್ತಿಗೆ ಲೇಖಕಿ, ಕವಿಯಿತ್ರಿ ಅಕ್ಷತಾರಾಜ್ ಪೆರ್ಲ ಅವರ “ಬೇಲಿ” ತುಳು ನಾಟಕ ಆಯ್ಕೆಯಾಗಿದೆ. ಬಿಸು ಪರ್ಬದಂದು ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಕುಡ್ಲ ತುಳುಕೂಟದ ಕಾರ್ಯದರ್ಶಿ ರತ್ನಕುಮಾರ್ ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.