ಏರ್ಪೋರ್ಟ್ನಲ್ಲಿ ವಿವಿಧ ಜಾತಿಯ 47 ಹೆಬ್ಬಾವು, 2 ಹಲ್ಲಿಗಳ ಸಾಗಣೆಗೆ ಯತ್ನ.. ಸಿಕ್ಕಿಬಿದ್ದ ಆರೋಪಿ

ತಿರುಚ್ಚಿ (ತಮಿಳುನಾಡು): ತಮಿಳುನಾಡಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೊಂದರಲ್ಲಿ ಅಧಿಕಾರಿಗಳು ವಿದೇಶದಿಂದ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 47 ಹಾವು ಮತ್ತು 2 ಹಲ್ಲಿಗಳನ್ನು ವಶಪಡಿಸಿಕೊಂಡಿದ್ದಾರೆ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈ, ಸಿಂಗಾಪುರ, ಮಲೇಷ್ಯಾ, ಶ್ರೀಲಂಕಾ ಮುಂತಾದೆಡೆಗೆ ಪ್ರತಿನಿತ್ಯ ವಿಮಾನಯಾನ ಸೇವೆ ಇದೆ. ಕೆಲ ಪ್ರಯಾಣಿಕರು ಚಿನ್ನಾಭರಣ ಕಳ್ಳಸಾಗಣೆ ಮಾಡುವಾಗ ಅವರನ್ನು ಹಿಡಿದು ಅಧಿಕಾರಿಗಳು ವಶಪಡಿಸಿಕೊಳ್ಳುವ ಕಾರ್ಯಚರಣೆಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಅಕ್ರಮಗಳನ್ನು ತಡೆಯಲು ಅಧಿಕಾರಿಗಳು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ನಿನ್ನೆ (ಜು.30) ಮಲೇಷ್ಯಾ ರಾಜಧಾನಿ ಕೌಲಾಲಂಪುರದಿಂದ ‘ಮಲಿಂಡೋ […]