ಯಶಸ್ವಿಯಾಗಿ ಉಡಾವಣೆಯಾದ ಅಗ್ನಿ -೧ ಕ್ಷಿಪಣಿ

ನವದೆಹಲಿ: ಒಡಿಶಾ ಕರಾವಳಿಯ ಎ.ಪಿ.ಜೆ ಅಬ್ದುಲ್ ಕಲಾಂ ದ್ವೀಪದಿಂದ ಗುರವಾರ ಮಧ್ಯಂತರ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿ-೧ ಉಡಾವಣೆಯು ಯಶಸ್ವಿಯಾಗಿ ನೆರವೇರಿತು ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ. ಈ ಕ್ಷಿಪಣಿಯನ್ನು ತರಬೇತಿ ಉದ್ದೇಶದಿಂದ ಉಡಾವಣೆ ಮಾಡಲಾಗಿದೆ ಪೂರ್ವ ನಿರ್ಧರಿತ ಗುರಿಯನ್ನು ಧ್ವಂಸಗೊಳಿಸುವ ಮೂಲಕ ಕ್ಷಿಪಣಿ ವ್ಯವಸ್ಥೆಯ ಕಾರ್ಯಾಚರಣೆಗೆ ಸಂಬಂಧಿಸಿದ ಎಲ್ಲ ಅಂಶಗಳು ಕ್ರಮವಾಗಿದೆ ಎಂಬುವುದನ್ನು ಈ ಪರೀಕ್ಷೆ ಸಾಬೀತು ಪಡಿಸಿದೆ