ಉಡುಪಿ ಕೃಷ್ಣಮಠದ ದರ್ಶನ ಸದ್ಯಕ್ಕಿಲ್ಲ: ಅದಮಾರು ಈಶಪ್ರಿಯ ಸ್ವಾಮೀಜಿ

ಉಡುಪಿ: ಸದ್ಯ ಕೃಷ್ಣಮಠದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶವಿಲ್ಲ. ಮುಂದಿನ ಪರಿಸ್ಥಿತಿ ನೋಡಿಕೊಂಡು ದರ್ಶನಕ್ಕೆ ಅನುಮತಿ ನೀಡಲಾಗುವುದು ಎಂದು ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ತಿಳಿಸಿದರು. ಕೃಷ್ಣಮಠದ ಪರಂಪರೆ ಉಳಿಸುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಭಕ್ತರು ಮನೆಯಲ್ಲಿದ್ದುಕೊಂಡು ದೇವರಿಗೆ ಪ್ರಾರ್ಥನೆ ಸಲ್ಲಿಸಬೇಕು. ಮಠದಲ್ಲಿಯೂ ದೇಶದ ಒಳಿತಿಗೆ ಪೂಜೆ, ಪ್ರಾರ್ಥನೆಗಳು ನಡೆಯಲಿವೆ ಎಂದು ಶ್ರೀಗಳು ಹೇಳಿದರು. ಮನಸ್ಸಿನ ದೋಷಗಳು ರೋಗಕ್ಕೆ ಮೂಲ ಕಾರಣ. ಆಯುರ್ವೇದದ ಪ್ರಕಾರ ಮನಸ್ಸು ಚೆನ್ನಾಗಿದ್ದರೆ ಎಂತಹ ರೋಗಗಳನ್ನೂ ಗೆಲ್ಲಬಹುದು. ಹಾಗಾಗಿ, ಮನಸ್ಸನ್ನು […]