800 ಸಿನಿಮಾಗಳಲ್ಲಿ ನಟಿಸಿದ್ದ ಜನಪ್ರಿಯ ಮಲಯಾಳಂ ನಟ ಪೂಜಾಪುರ ರವಿ ಇನ್ನಿಲ್ಲ

800 ಚಲನಚಿತ್ರಗಳು, 4,000 ನಾಟಕ: ಐದು ದಶಕಗಳಿಂದ ನಟನಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಅವರು ಸುಮಾರು 800 ಚಲನಚಿತ್ರಗಳು ಮತ್ತು ಸುಮಾರು 4,000 ನಾಟಕಗಳಲ್ಲಿ ನಟಿಸಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನೂ ಸಂಪಾದಿಸಿದ್ದರು. ಇಂದು ಇಹಲೋಕ ತ್ಯಜಿಸಿದ್ದು, ರಂಗಭೂಮಿ, ಚಿತ್ರರಂಗ, ಅಭಿಮಾನಿ ಬಳಗದವರು ಕಣ್ಣೀರಿಟ್ಟಿದ್ದಾರೆ. ಜನಪ್ರಿಯ ನಟ ಪೂಜಾಪುರ ರವಿ ನಿಧನರಾಗಿದ್ದಾರೆ. ಇಡುಕ್ಕಿ ಜಿಲ್ಲೆಯ ಮರಯೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಮರಯೂರಿನಲ್ಲಿರುವ ಮಗಳ ಮನೆಯಲ್ಲಿ ಜೀವನ ನಡೆಸುತ್ತಿದ್ದ ಇವರು ಭಾನುವಾರ ಬೆಳಗ್ಗೆ ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ […]