ಕುಂದಾಪುರದ ನಿರ್ಗಮಿತ ಎಸಿ ಮುಧುಕೇಶ್ವರ್ ಮನೆ ಮೇಲೆ ಎಸಿಬಿ ಅಧಿಕಾರಿಗಳ ದಾಳಿ: 3,08,000 ನಗದು, 23 ಸರ್ಕಾರಿ ಕಡತ ವಶಕ್ಕೆ !

ಕುಂದಾಪುರ: ಮೂರು ದಿನಗಳ ಹಿಂದೆಷ್ಟೇ ವರ್ಗಾವಣೆಗೊಂಡಿದ್ದ ನಿರ್ಗಮಿತ ಕುಂದಾಪುರ ಉಪವಿಭಾಗಾಧಿಕಾರಿ  ಡಾ. ಎಸ್.ಎಸ್.ಮಧುಕೇಶ್ವರ್ ಅವರ ಸರ್ಕಾರಿ ವಸತಿಗೃಹದ ಮೇಲೆ ಗುರುವಾರ ಮಧ್ಯಾಹ್ನ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವರ್ಗಾವಣೆಗೊಂಡ ಬಳಿಕವೂ ಲಂಚ ಪಡೆದು ಕಡತಗಳನ್ನು ವಿಲೇವಾರಿ ಮಾಡುತ್ತಿದ್ದಾರೆಂಬ ದೂರಿನ ಮೇರೆಗೆ ಡಿವೈಎಸ್ಪಿ ಮಂಜುನಾಥ್ ಕವರಿ ನೇತೃತ್ವದ ಎಸಿಬಿ ತಂಡ ದಾಳಿ ನಡೆಸಿದೆ. ದಾಳಿಯ ವೇಳೆಯಲ್ಲಿ ಸಿಕ್ಕ 3,08,000 ರೂ ನಗದು ಹಾಗೂ 23 ಭೂ ವ್ಯಾಜ್ಯಕ್ಕೆ ಸಂಬಂಧಿಸಿದ ಸರ್ಕಾರಿ ಕಡತಗಳನ್ನು ವಶಕ್ಕೆ ಪಡೆದು ತನಿಖೆ ಚುರುಕುಗೊಳಿಸಿದ್ದಾರೆ. […]