ಎ.15-19: ಕಚ್ಚೂರು ಶ್ರೀ ಮಲ್ತಿ ದೇವಿ ಶ್ರೀ ಬಬ್ಬುಸ್ವಾಮಿ ಮೂಲ ಕ್ಷೇತ್ರದ ವಾರ್ಷಿಕ ಜಾತ್ರೆ

ಬ್ರಹ್ಮಾವರ: ಕಾರಣಿಕ ಕ್ಷೇತ್ರ ಕಚ್ಚೂರು ಶ್ರೀ ಮಲ್ತಿ ದೇವಿ ಶ್ರೀ ಬಬ್ಬುಸ್ವಾಮಿ ಮೂಲ ಕ್ಷೇತ್ರದ ವಾರ್ಷಿಕ ಜಾತ್ರೆ ಎ. 15ರಿಂದ 19ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ. ವಿವಿಧ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಹರಕೆ ಸಮರ್ಪಣೆ ಮಾಡುವುದು ಇಲ್ಲಿನ ವೈಶಿಷ್ಟ್ಯವಾಗಿದೆ. ಎ‌.15 ರಂದು ಅಪರಾಹ್ನ 3ಕ್ಕೆ ಹೊರ ಕಾಣಿಕೆ ನಡೆಯಲಿದ್ದು, ವಿವಿಧ ಕಡೆಗಳಿಂದ ಬಂದ ಹಸಿರು ಹೊರ ಕಾಣಿಕೆಯನ್ನು ಬಾರ್ಕೂರು ಪೇಟೆಯಿಂದ ಮೆರವಣಿಗೆ ಮೂಲಕ ಶ್ರೀಕ್ಷೇತ್ರಕ್ಕೆ ಸಮರ್ಪಿಸಲಾಗುವುದು. ಸಂಜೆ ವಿವಿಧ ಭಜನ ತಂಡಗಳಿಂದ ಭಕ್ತಿ ಹೆಜ್ಜೆ […]