ಆಂಧ್ರ ಸಿಎಂ ರಿಲೀಫ್ ಫಂಡ್ ನಿಂದ 58 ಕೋಟಿ ರೂ. ದೋಚಲು ಯತ್ನ: ತುಳುಚಿತ್ರದ ನಿರ್ದೇಶಕ ಸಹಿತ ಆರು ಮಂದಿಯ ಬಂಧನ

ಮಂಗಳೂರು: ಆಂಧ್ರಪ್ರದೇಶದ ಸಿಎಂ ರಿಲೀಫ್​ ಫಂಡ್​ಗೆ ಕನ್ನ ಹಾಕಲು ಯತ್ನಿಸಿದ್ದ ಆರೋಪದಡಿ ತುಳು ಚಿತ್ರರಂಗದ​ ನಿರ್ದೇಶಕ ಉದಯ್ ಕುಮಾರ್ ಸೇರಿದಂತೆ ಒಟ್ಟು 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕತರ್ನಾಕ್ ಖದೀಮರ ತಂಡವು ಮೂಡುಬಿದಿರೆಯ ಬ್ಯಾಂಕ್ ವೊಂದರಲ್ಲಿ ನಕಲಿ ಚೆಕ್ ಮೂಲಕ 58 ಕೋಟಿ ರೂ. ವಿತ್​ ಡ್ರಾ ಮಾಡಲು ಮುಂದಾಗಿದ್ದರು. ಇಷ್ಟು ದೊಡ್ಡ ಮೊತ್ತವನ್ನು ಸಿಎಂ ರಿಲೀಫ್ ಫಂಡ್ ನಿಂದ ವಿಥ್ ಡ್ರಾ ಮಾಡುತ್ತಿರುವ ಬಗ್ಗೆ ಅನುಮಾನಗೊಂಡ ಬ್ಯಾಂಕ್ ಮ್ಯಾನೇಜರ್ ಆಂಧ್ರ ಸರಕಾರಕ್ಕೆ ಮಾಹಿತಿ ನೀಡಿದ್ದಾರೆ. […]