ಜ.20 ರಂದು ತುಳುವರನ್ನು ರಂಜಿಸಲು ಬರುತ್ತಿದೆ ಬಹು ನಿರೀಕ್ಷಿತ ತುಳು ಹಾರರ್ ಚಲನಚಿತ್ರ ಶಕಲಕ ಬೂಮ್ ಬೂಮ್

ಮಂಗಳೂರು: ತುಳುವರೆಲ್ಲಾ ಕಾತುರದಿಂದ ಕಾಯುತ್ತಿರುವ ತುಳುನಾಡಿನ ಮೊದಲ ಹಾರರ್ ಚಿತ್ರ ಎನ್ನುವ ಹೆಗ್ಗಳಿಕೆ ಹೊಂದಿರುವ ಶಕಲಕ ಬೂಮ್ ಬೂಮ್ ಚಿತ್ರವು ಜ.20 ರಂದು ತುಳುನಾಡಿನಾದ್ಯಂತ ಬಿಡುಗಡೆಯಾಗುತ್ತಿದೆ. ಈ ಬಗ್ಗೆ ಮಂಗಳೂರಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಿರ್ಮಾಪಕ ನಿತ್ಯಾನಂದ್ ನಾಯಕ್ ಮಾಹಿತಿ ನೀಡಿ, ಚಿತ್ರವನ್ನು ಶ್ರೀಶ ಎಳ್ಳಾರೆ ನಿರ್ದೇಶಿಸಿದ್ದಾರೆ. ಉಮೇಶ್ ಪ್ರಭು ಮಾಣಿಬೆಟ್ಟು ಸಹನಿರ್ಮಾಪಕರಾಗಿರುವ ಈ ಚಿತ್ರಕ್ಕೆ ಡಾಲ್ವಿನ್ ಕೊಳಗಿರಿ ಸಂಗೀತ ನಿರ್ದೇಶನ ಮತ್ತು ಪ್ರಜ್ವಲ್ ಸುವರ್ಣ ಮತ್ತು ಅರುಣ್ ರೈ ಛಾಯಾಗ್ರಹಣವಿದೆ ಎಂದರು. ಚಿತ್ರವು 150 […]