ಸಮಾಜದ ಸಮಸ್ತರನ್ನೂ ಒಗ್ಗೂಡಿಸಿ ಸಮುದಾಯೋನ್ನತಿಯಿಂದ ರಾಷ್ಟ್ರೋನ್ನತಿಯತ್ತ ಸಾಗುವ ವಿಶ್ವ ಬಂಟರ ಸಮ್ಮೇಳನ-2023

ಅವಿಭಜಿತ ದ.ಕ ಜಿಲ್ಲೆಯ ಅನಭಿಷಿಕ್ತ ದೊರೆಗಳಾಗಿ ಮೆರೆದ ಜನನಿ, ಜನ್ಮ ಭೂಮಿ ಮತ್ತು ಕರ್ಮಭೂಮಿಗೆ ಕೀರ್ತಿ ತಂದ ಬಾವ, ಗುತ್ತು, ಬರ್ಕೆ, ಬೂಡಿನ ಗತ್ತು ಗೈರತ್ತಿನ ಕ್ಷಾತ್ರ ತೇಜದ ವೈಶ್ಯ ವರ್ಣದ ಸಮುದಾಯ ಬಂಟ ಯಾನೆ ನಾಡವರದ್ದು. ಬಂಟ ಅಂದರೆ ಸಚಿವ- ಮಂತ್ರಿ- ಭಟ ಎಂಬುದಾಗಿಯೂ, ಅರಸೊತ್ತಿಗೆಯ ಕಾಲದಲ್ಲಿ ಆಳುಪ ಅರಸರಾಗಿ, ಸಾಮಂತಿಕೆಯ ಕಾಲದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದವರು. ಛಲ, ಬುದ್ದಿ ಬಲ- ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಇನ್ನೊಂದು ಹೆಸರಿದ್ದರೆ ಅದು ಬಂಟರದ್ದು. ಆಡು ಮುಟ್ಟದ ಸೊಪ್ಪಿಲ್ಲ, […]