ದ.ಕ‌. ಹಾಲು ಉತ್ಪಾದಕರ ಒಕ್ಕೂಟದ ರೈತ ಕಲ್ಯಾಣ ಟ್ರಸ್ಟ್ ನಿಂದ ನೀಲಾವರ ಗೋಶಾಲೆಗೆ ₹1 ಲಕ್ಷ ದೇಣಿಗೆ ಹಸ್ತಾಂತರ

ಉಡುಪಿ: ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ಪೇಜಾವರ ಮಠದ ಗೋವರ್ಧನಗಿರಿ ಟ್ರಸ್ಟ್‌ ನಿಂದ ನಡೆಸಲ್ಪಡುತ್ತಿರುವ ನೀಲಾವರ ಗೋಶಾಲೆಗೆ ₹1 ಲಕ್ಷ ದೇಣಿಗೆ ಹಸ್ತಾಂತರಿಸಲಾಯಿತು. ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ. ರವಿರಾಜ್ ಹೆಗ್ಡೆ ಅವರು ಪೇಜಾವರ ವಿಶ್ವಪ್ರಸನ್ನತೀರ್ಥ ಶ್ರೀಪಾದರನ್ನು ಇಂದು ಭೇಟಿಯಾಗಿ ದೇಣಿಗೆಯ ಚೆಕ್ ಹಸ್ತಾಂತರಿಸಿದರು.‌