ರಾಜ್ಯ ಮಲೆಕುಡಿಯ ಸಂಘ: ಅ. 24ಕ್ಕೆ ಬೈಲಾ ರಚನಾ ಸಭೆ

ಕಾರ್ಕಳ: ರಾಜ್ಯ ಮಲೆಕುಡಿಯ ಸಂಘ, ಕರ್ನಾಟಕ ಇದರ ಸಂಘದ ನೋಂದಣಿ ಹಾಗೂ ಪುನಾರಚನೆ ಮಾಡಲು ತೀರ್ಮಾನಿಸಿದ್ದು, ಪೂರ್ವ ತಯಾರಿಯಾಗಿ ಬೈಲಾ ರಚನಾ ಸಭೆಯನ್ನು ಅ. 24 ರಂದು ಬೆಳಿಗ್ಗೆ 10.30ಕ್ಕೆ ಬೆಳ್ತಂಗಡಿ ಕೊಯ್ಯುರು ಶಿವಗಿರಿ ಮಲೆಕುಡಿಯ ಸಮುದಾಯ ಭವನದಲ್ಲಿ ಕರೆಯಲಾಗಿದೆ.

ರಾಜ್ಯ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರುಗಳು, ನಾನಾ ಜಿಲ್ಲಾ ಸಂಘದ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು, ನಾನಾ ತಾಲೂಕು ಸಮಿತಿ ಪದಾಧಿಕಾರಿಗಳು ಹಾಗೂ ಆಸಕ್ತರು ಸಮಯಕ್ಕೆ ಸರಿಯಾಗಿ ಉಪಸ್ಥಿತರಿದ್ದು, ಸಹಕರಿಸಬೇಕಾಗಿ ವಿನಂತಿಸಲಾಗಿದೆ.