ಶಿರ್ವ: ಅನಾದಿ ಕಾಲದಿಂದಲೂ ಕೃಷಿ ಮಾನವನ ಕುಲ ಕಸುಬು. ಆಧುನಿಕತೆ ಬೆಳೆದಂತೆ ಮನುಷ್ಯ ಬೇರೆ ಬೇರೆ ಕೆಲಸಕಾಯ೯ಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಕಾರಣದಿಂದಾಗಿ ಕೃಷಿ ಹಿಂದುಳಿಯುವಂತಾಗಿದೆ. ಆದರೆ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೃಷಿ ಕಾಯ೯ ಇಂದು ಸಾಗುತ್ತಿದ್ದು, ಈ ನಿಟ್ಟಿನಲ್ಲಿ ಯುವಜನತೆ ಭಾಗಿಯಾಗುವ ಮೂಲಕ ನೆಲ-ಜಲ ಭೂಮಿಯ ಸಂರಕ್ಷಣೆ ಮಾಡಬೇಕು ಎಂದು ಸಾಧಕ ಕೃಷಿಕ ರಾಘವೇಂದ್ರ ನಾಯಕ್ ಹೇಳಿದರು.
ಶಿರ್ವ ಸಂತ ಮೇರಿ ಮಹಾವಿದ್ಯಾಲಯದ ಗ್ರೀನ್ ಟೀಚರ್ ಪೋರಂನ ಸಹಭಾಗಿತ್ವದಲ್ಲಿ ಎನ್ಎಸ್ಎಸ್, ಎನ್ ಸಿಸಿ,ರೋವರ್ಸ್ & ರೇಂಜರ್ಸ್,ರೆಡ್ ಕ್ರಾಸ್,ರೋಟರಿ ಶಿವ೯ ಇವರ ಸಂಯುಕ್ತ ಆಶ್ರಯದಲ್ಲಿ ಕುಂಜಿಗುಡ್ಡೆ ಪಿಲಾರ್ ಫೆಡ್ರಿಕ್ ಕ್ಯಾಸ್ತಲಿನೊ ಮತ್ತು ಹೆಲೆನ ಕ್ಯಾಸ್ತಲಿನೊ ಅವರ ಗದ್ದೆಯಲ್ಲಿ ನಡೆದ ನೇಜಿ ನಾಟಿ ಕೃಷಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಹೆರಾಲ್ಡ್ ಐವನ್ ಮೊನಿಸ್ ಅಧ್ಯಕ್ಷತೆ ವಹಿಸಿದ್ದರು.
ಗ್ರೀನ್ ಟೀಚರ್ ಪೋರಂನ ಸಂಯೋಜಕಿ ಹಾಗೂ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ನಿದೇ೯ಶಕಿ ಯಶೋದ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ರೋಟರಿ ಶಿವ೯ದ ಕಾರ್ಯದರ್ಶಿ ರೋಟರಿ ಜಿನೇಶ್ ಬಳ್ಳಾ ಲ್, ಕರ್ನಾಟಕ ಸಾಹಿತ್ಯ ಪರಿಷತ್ತು ಕಾಪು ವಲಯ ಅಧ್ಯಕ್ಷ ಪುಂಡಲೀಕ ಮರಾಠೆ, ಕಾಲೇಜಿನ ಎನ್ ಸಿಸಿ ಘಟಕದ ಅಧಿಕಾರಿ ಲೆಪ್ಟಿನೆಂಟ್ ಕೆ.ಪ್ರವಿಣ್ ಕುಮಾರ್, ಎನ್ ಎಸ್ ಎಸ್ ಘಟಕದ ಸಂಯೋಜಕ ಪ್ರೇಮನಾಥ್, ರೇಂಜರ್ಸ &ರೋವರ್ಸ ಘಟಕದ ಪ್ರಕಾಶ್ , ಸಂಗೀತಾ, ರೆಡ್ ಕ್ರಾಸ್ ಘಟಕ ದ ಮುರಳಿ, ಅಧ್ಯಾಪಕ ಸಂಘದ ಕಾಯ೯ದಶಿ೯ ರೀಮಾ ಲೋಬೊ, ಹಿರಿಯ ಉಪನ್ಯಾಸಕ ವಿಠಲ್ ನಾಯಕ್ ಉಪಸ್ಥಿತರಿದ್ದರು.