ಶಿಕ್ಷಾ ಪ್ರಭಾ ಸಂಸ್ಥೆ: ನೀಟ್/ಸಿಇಟಿ/ಜೆಇಇ ಮೈನ್ ತರಗತಿ ಆರಂಭ: ವಿದ್ಯಾರ್ಥಿಗಳಿಗಿದು ದಾರಿದೀಪ

ಕುಂದಾಪುರ: ಉತ್ತಮ್ ಕ್ಲಿನಿಕ್ ಕಟ್ಟಡದ ಎರಡನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಾ ಪ್ರಭಾ ಸಂಸ್ಥೆಯು ಸಿಎ/ಸಿಎಸ್/ಸಿಎಂಎ ತರಬೇತಿಗೆ ಉಡುಪಿ ಜಿಲ್ಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸಂಸ್ಥೆಯೆಂದು ಹೆಗ್ಗಳಿಕೆ ಹೊತ್ತಿದ್ದು ಪೋಷಕರು ಮತ್ತು ವಿದ್ಯಾರ್ಥಿಗಳ ಅಪೇಕ್ಷೆಯಂತೆ ಉತ್ತಮ ಗುಣಮಟ್ಟದ ನೀಟ್/ಸಿಇಟಿ/ಜೆಇಇ ಮೈನ್ ತರಗತಿ ಆರಂಭಿಸಿದೆ.

ಗ್ರಾಮೀಣಪ್ರದೇಶದ ವಿದ್ಯಾರ್ಥಿಗಳಿಗೆ ದಾರಿದೀಪ:
ನುರಿತ ಗುಣಮಟ್ಟದ ಶಿಕ್ಷಕರು ರಾಜ್ಯದ ನಾನಾ ಭಾಗಗಳಿಂದ ಆಗಮಿಸಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಕೈಗೆಟಕುವ ಬೆಲೆಯಲ್ಲಿ ನೀಡಬೇಕು ಎನ್ನುವುದು ಸಂಸ್ಥೆಯ ಉದ್ದೇಶ.

ಮೂಡಬಿದ್ರೆ ಆಳ್ವಾಸ್ ಪಿಯು ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ರಮೇಶ್ ಶೆಟ್ಟಿ ಅವರ ಮಾರ್ಗದರ್ಶನದಂತೆ ಸಂಸ್ಥೆಯಲ್ಲಿ ವಿಜ್ಞಾನ ವಿಭಾಗದ ತರಗತಿಗಳು ನಡೆಯಲಿದ್ದು, ಉತ್ತಮ ಫಲಿತಾಂಶ ದೊರೆಯಲು ಇದು ಸಹಕಾರಿಯಾಗಲಿದೆ.

ಹೆಚ್ಚಿನ ಮಾಹಿತಿಗಾಗಿ ಕುಂದೇಶ್ವರ ದೇವಸ್ಥಾನ ರಸ್ತೆಯ ಉತ್ತಮ ಕ್ಲಿನಿಕ್ ಕಟ್ಟಡದ ಎರಡನೇ ಮಹಡಿಯಲ್ಲಿರುವ ಸಂಸ್ಥೆಯ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಅಥವಾ ಸಂಸ್ಥೆಯ ವೆಬ್ ಸೈಟ್ ಶಿಕ್ಷಾ ಪ್ರಭಾ ಡಾಟ್ ಕಾಂ ಸಂಪರ್ಕಿಸಬಹುದು ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.