ಪತ್ನಿ ಸುನಂದ ಪುಷ್ಕರ್​ ಅನುಮಾಸ್ಪದ ಸಾವಿನ ಪ್ರಕರಣ: ಶಶಿ ತರೂರ್​​​ ಖುಲಾಸೆ

ನವದೆಹಲಿ: ಪತ್ನಿ ಸುನಂದ ಪುಷ್ಕರ್​ ಅವರ ಅನುಮಾಸ್ಪದ ಸಾವಿನ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್​​​ ಖುಲಾಸೆಗೊಂಡಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ಕೋರ್ಟ್​​ ಶಶಿ ತರೂರ್ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಿಗೊಳಿಸಿ ಕ್ಲೀನ್​​ ಚಿಟ್​ ಕೊಟ್ಟಿದೆ.
51 ವರ್ಷದ ಸುನಂದ ಪುಷ್ಕರ್ ಅವರ ಮೃತದೇಹ 2014ರ ಜನವರಿ 17 ರಂದು ದೆಹಲಿ ಲಕ್ಸುರಿ ಹೋಟೆಲ್​​ನಲ್ಲಿ ಪತ್ತೆಯಾಗಿತ್ತು.

ಶಶಿತರೂರ್ ಅವರ ಮನೆಯ ದುರಸ್ಥಿ ಕಾರ್ಯ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಅವರು ಹೋಟೆಲ್​​ನಲ್ಲಿ ವಾಸ್ತವ್ಯ ಮಾಡುತ್ತಿದ್ದರು. ಆ ವೇಳೆ ದೆಹಲಿ ಪೊಲೀಸರು ಶಶಿತರೂರ್ ವಿರುದ್ಧ ಆತ್ಮಹತ್ಯೆ ಕುಮ್ಮಕ್ಕು ನೀಡಿದ ಆರೋಪದ ಅಡಿ ದೂರು ದಾಖಲಾಗಿತ್ತು.