ಎರಡನೇ ಬಾರಿಗೆ ಫೇಸ್ ಬುಕ್, ಇನ್ಸ್ಟಾಗ್ರಾಮ್ ಆ್ಯಪ್ ಗಳ ಸರ್ವರ್ ಡೌನ್: ಕ್ಷಮೆಯಾಚನೆ

ಹೊಸದಿಲ್ಲಿ: ಸಾಮಾಜಿಕ ಜಾಲತಾಣದ ಪ್ರಭಾವಿ ಆ್ಯಪ್ ಗಳಾದ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ ಆ್ಯಪ್ ಗಳ ಸರ್ವರ್ ಮತ್ತೆ ಡೌನ್ ಆಗಿದೆ. ಇದಕ್ಕಾಗಿ ಫೇಸ್ ಬುಕ್ ತನ್ನ ಗ್ರಾಹಕರಲ್ಲಿ ಕ್ಷಮೆಯಾಚಿಸಿದೆ.

ಈ ಬಗ್ಗೆ ಫೇಸ್‌ಬುಕ್ ರಾತ್ರಿ 12 ಗಂಟೆಗೆ ಟ್ವೀಟ್ ಮಾಡಿದ್ದು, ನಮ್ಮ ಆ್ಯಪ್‌ಗಳು ಮತ್ತು ಉತ್ಪನ್ನಗಳನ್ನು ಬಳಸುವಲ್ಲಿ ಕೆಲವರಿಗೆ ತೊಂದರೆಯಾಗುತ್ತಿದೆ ಎಂದು ನಮಗೆ ತಿಳಿದಿದೆ. ಸಾಧ್ಯವಾದಷ್ಟು ಬೇಗನೆ ಸಾಮಾನ್ಯ ಸ್ಥಿತಿಗೆ ಮರಳಲು ನಾವು ಕೆಲಸ ಮಾಡುತ್ತಿದ್ದೇವೆ ಮತ್ತು ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ ಎಂದು ಹೇಳಿದೆ.

ಸೋಮವಾರವಷ್ಟೇ ಸತತ 6 ಗಂಟೆಗಳ ಕಾಲ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವ್ಯಾಟ್ಸಪ್ ಮೆಸೆಂಜರ್ ಸೇವೆ ಸ್ಥಗಿತಗೊಂಡಿತ್ತು. ಇದೀಗ ಶುಕ್ರವಾರ ಮತ್ತೆ ಎರಡು ಗಂಟೆಗಳ ಕಾಲ ಫೇಸ್‌ಬುಕ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು.