ಕುಂದಾಪುರ: ಶಂಕರನಾರಾಯಣದ ಮದರ್ ತೆರೆಸಾ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ “ ಸೈನ್ಸ್ ಚಾಂಪ್ – 2025” ಸ್ಪರ್ಧೆಯನ್ನು ಅತ್ಯುತ್ತಮವಾಗಿ ಆಯೋಜಿಸಿತು.
ವಿಜ್ಞಾನ ವಿದ್ಯಾರ್ಥಿಗಳಲ್ಲಿ ಜ್ಞಾನವೃದ್ಧಿ, ವಿಶ್ಲೇಷಣಾತ್ಮಕ ಚಿಂತನೆ ಹಾಗೂ ನವೀನತೆಗೆ ಪ್ರೋತ್ಸಾಹ ನೀಡುವ ಉದ್ದೇಶದೊಂದಿಗೆ ಈ ಸ್ಪರ್ಧೆ ನಡೆಯಿತು.

ಆರಂಭಿಕ ಸುತ್ತಿನ ಮೂಲಕ ಆಯ್ಕೆಯಾದ ನಾಲ್ವರು ಸ್ಪರ್ಧಾರ್ಥಿಗಳು ಅಂತಿಮ ಸುತ್ತಿನಲ್ಲಿ ತಮ್ಮ ಪ್ರತಿಭೆ ಹಾಗೂ ಚಾತುರ್ಯವನ್ನು ಮೆರೆದರು. ವಿವಿಧ ಹಂತಗಳನ್ನು ಒಳಗೊಂಡ ಈ ಸ್ಪರ್ಧೆಯಲ್ಲಿ — ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರದ ಪ್ರಶ್ನೋತ್ತರಗಳು, ತಂತ್ರಜ್ಞಾನದ ಕುರಿತು ಚಿತ್ರ, ಒಗಟುಗಳು, ಪ್ರಕರಣಗಳ ಅಧ್ಯಯನ, ಸರಣಿ ಪ್ರಶ್ನೆಗಳ ಮೂಲಕ ವಾಕ್ಯ ಪತ್ತೆಹಚ್ಚುವುದು, ಒಂದು ವಿಷಯದ ಪರ-ವಿರೋಧ ಚರ್ಚೆಗಳು ಮುಂತಾದ ನವೀನ ಸುತ್ತುಗಳು ವಿದ್ಯಾರ್ಥಿಗಳಿಗೆ ಸವಾಲಾಗಿದ್ದವು.

ಸ್ಪರ್ಧೆಯ ಅಂತಿಮ ಫಲಿತಾಂಶದಲ್ಲಿ ದ್ವಿತೀಯ ಪಿಯುಸಿಯ ವರ್ಷಿಣಿ ಪ್ರಥಮ ಸ್ಥಾನವನ್ನು, ಅಂಜಲಿ ದ್ವಿತೀಯ ಸ್ಥಾನವನ್ನು, ರೇಚಲ್ ತೃತೀಯ ಸ್ಥಾನವನ್ನು ಪಡೆದುಕೊಂಡರು.

ಪ್ರತೀ ಶೈಕ್ಷಣಿಕ ವರ್ಷದಲ್ಲಿ ವಿಜ್ಞಾನ ವಿದ್ಯಾರ್ಥಿಗಳ ಜ್ಞಾನ, ಕೌಶಲ ಮತ್ತು ಚಿಂತನೆಗೆ ಉತ್ತೇಜನ ನೀಡುವ ಉದ್ದೇಶದೊಂದಿಗೆ ಸಂಸ್ಥೆಯು ಕೈಗೊಳ್ಳುವ ಹಲವು ಸ್ಪರ್ಧೆಗಳಲ್ಲಿ, ಈ ಸ್ಪರ್ಧೆಯೂ ವಿದ್ಯಾರ್ಥಿಗಳ ವಿಜ್ಞಾನಪರ ದಿಟ್ಟ ಚಿಂತನೆಗೆ ಹೊಸ ದಾರಿ ತೆರೆಯಿತು.
ರಸಾಯನಶಾಸ್ತ್ರ ವಿಭಾಗದ ಮಂಜುನಾಥ ಬಾಯರಿ ಅವರ ಉತ್ತಮ ನಿರ್ವಹಣೆ ಹಾಗೂ ಎಲ್ಲ ಉಪನ್ಯಾಸಕರ ಸಹಕಾರದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಸಂಪೂರ್ಣಗೊಂಡಿತು.


















