ಎಸ್. ಕೆ. ಗೋಲ್ಡ್‌ ಸ್ಮಿತ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ನವೀಕೃತ ‘ವಿಶ್ವಸೌಧ’ ಕಟ್ಟಡ ಉದ್ಘಾಟನೆ- ವಜ್ರಮಹೋತ್ಸವದ ಸಮಾರೋಪ ಸಮಾರಂಭ

ಮಂಗಳೂರು : ರಾಜ್ಯದ ಉತ್ತಮ ಸಹಕಾರ ಸಂಘ ಪ್ರಶಸ್ತಿ-2007, ರಾಜ್ಯದ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿ -2008 ಪುರಸ್ಕೃತ ಕೊಟ್ಟಾರಚೌಕಿಯ ಎಸ್. ಕೆ. ಗೋಲ್ಡ್‌ ಸ್ಮಿತ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಇದರ ನವೀಕೃತ ‘ವಿಶ್ವಸೌಧ’ ಕಟ್ಟಡ ಉದ್ಘಾಟನೆ ಮತ್ತು ವಜ್ರಮಹೋತ್ಸವದ ಸಮಾರೋಪ ಸಮಾರಂಭ ನವೆಂಬರ್ 09 ರಂದು ನಡೆಯಲಿದೆ. ದೀಪ ಪ್ರಜ್ವಲನೆ ಮತ್ತು ಆಶೀರ್ವಚನವನ್ನು ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಅವರು ನೀಡಲಿದ್ದಾರೆ. ಜಗದ್ಗುರು ಅನಂತಶ್ರೀವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ.

ನವೀಕೃತ ವಿಶ್ವಸೌಧ ಕಟ್ಟಡದ ಉದ್ಘಾಟನೆಯನ್ನು
ಸಹಕಾರ ರತ್ನ ಡಾ.ಎಂ.ಎನ್. ರಾಜೇಂದ್ರ ಕುಮಾರ್
ಅಧ್ಯಕ್ಷರು, ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಲಿ. ಮಂಗಳೂರು ಅಧ್ಯಕ್ಷರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಬೆಂಗಳೂರು, ಅಧ್ಯಕ್ಷತೆಯನ್ನು ಪಿ ಉಪೇಂದ್ರ ಆಚಾರ್ಯ ಅಧ್ಯಕ್ಷರು, ಎಸ್.ಕೆ.ಬಿ.ಐ ಕೋ ಅಪರೇಟಿವ್ ಸೊಸೈಟಿ ಲಿ., ಮಂಗಳೂರು, ಲಿಫ್ಟ್ ಉದ್ಘಾಟನೆಯನ್ನು ಯುಟಿ ಖಾದರ್ ಸಭಾಪತಿಗಳು, ಕರ್ನಾಟಕ ವಿಧಾನಸಭೆ, ನವೀಕೃತ ಆಡಳಿತ ಕಚೇರಿ ಉದ್ಘಾಟನೆಯನ್ನು ಸಚಿವರಾದ ದಿನೇಶ್ ಗುಂಡೂರಾವ್, ನವೀಕೃತ ಕೊಟ್ಟಾರ ಚೌಕಿ ಶಾಖೆಯ ಉದ್ಘಾಟನೆಯನ್ನು ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಪಾಲ್ಕೆ ಬಾಬುರಾಯ ಆಚಾರ್ಯ ವೇದಿಕೆ ಉದ್ಘಾಟನೆಯನ್ನು ಶ್ರೀ ಧನಂಜಯ ಪಾಲ್ಕೆ ಕೆನರಾ ಜುವೆಲ್ಲರ್ಸ್ ಮಂಗಳೂರು, ಪಾಲ್ಕೆ ಬಾಬುರಾಯ ಆಚಾರ್ಯ ಪುತ್ತಳಿ ಅನಾವರಣವನ್ನು ಶಿಲ್ಪಿ ಡಾ.ಅರುಣ್ ಯೋಗಿರಾಜ್ ಅವರು ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಡಾ| ವೈ ಭರತ್ ಶೆಟ್ಟಿ ಡಿ. ವೇದವ್ಯಾಸ ಕಾಮತ್,ಉಮೇಶ್ ಆಚಾರ್ಯ,ರಮೇಶ್ ಎಚ್.ಎನ್, ಶಶಿಕುಮಾರ್ ರೈ, ಬಲ್ಯೊಟ್ಟು,ಜಯಕರ ಶೆಟ್ಟಿ ಇಂದ್ರಾಳಿ, ತ್ರಿವೇಣಿ ರಾವ್ ಕೆ ಭಾಗವಹಿಸಲಿದ್ದಾರೆ
ಪೂರ್ವಾಹ್ನ 9 ರಿಂದ 10:30 ರವರೆಗೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನೂತನ ವಿಶ್ವ ದಾಖಲೆ ಖ್ಯಾತಿಯ ವಿದ್ವಾನ್ ಯಶವಂತ ಎಂಜಿ ಮತ್ತು ಬಳಗದವರಿಂದ ಭಾವ ಭಕ್ತಿ ಗಾನಸುಧಾ , ಅಪರಾಹ್ನ 2.00 ರಿಂದ 2.45 ರವರೆಗೆ ವಿಚಾರಗೋಷ್ಠಿ ,ಅಪರಾಹ್ನ 3ರಿಂದ ಸಾಯಂಕಾಲ 6ರವರೆಗೆ ಯಕ್ಷ ತೀರ್ಥ ಕಲಾ ಸೇವೆ ನೂರಾಳ್ ಬೆಟ್ಟು ಇವರ ಸಂಯೋಜನೆಯಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ನಾಟ್ಯ ವೈಭವ ,ಸಾಯಂಕಾಲ 6.00 ರಿಂದ ಸಿಬ್ಬಂದಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.