ಉಡುಪಿ: ಮದುವೆಯಾಗುವುದಾಗಿ ನಂಬಿಸಿ ಯುವಕನೋರ್ವ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಮಣಿಪಾಲದಲ್ಲಿ ನಡೆದಿದೆ. ಈ ಬಗ್ಗೆ ಸಂತ್ರಸ್ತ ಯುವತಿ ಉಡುಪಿ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ತಮಿಳುನಾಡಿನ ವೆಲ್ಲೂರು ನಿವಾಸಿ ಪ್ರಶಾಂತ್ ಮುದಲಿಯಾರ್ ವಿರುದ್ಧ ಅತ್ಯಾಚಾರ ಆರೋಪ ದಾಖಲಾಗಿದೆ. ಈತನಿಗೆ ಸಂತ್ರಸ್ತ ಯುವತಿ ಕಾಲೇಜಿನಲ್ಲಿ ಪರಿಚಯವಾಗಿದ್ದು, ಬಳಿಕ ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿದೆ.
ಕಳೆದ ಜೂನ್ ನಲ್ಲಿ ಆರೋಪಿ ಪ್ರಶಾಂತ್ ಯುವತಿಯನ್ನು ಮಣಿಪಾಲಕ್ಕೆ ಕರೆಸಿಕೊಂಡು ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದನು. ಆದಾದ ಬಳಿಕ ಯುವತಿ ಮದುವೆ ಆಗುವಂತೆ ಕೇಳಿಕೊಂಡಿದ್ದಳು. ಆದರೆ ಯುವಕ ವಿವಿಧ ನೆಪವೊಡ್ಡಿ ಮದುವೆಗೆ ನಿರಾಕರಿಸಿ ಯುವತಿಗೆ ವಂಚಿಸಿದ್ದಾನೆ ಎಂದು ದೂರಿನಲ್ಲಿ ಯುವತಿ ತಿಳಿಸಿದ್ದಾಳೆ