ಬೆಂಗಳೂರು: ತೈಲ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಇಂದು ಪೆಟ್ರೋಲ್ ದರ ಪ್ರತಿ ಲೀಟರ್ ಗೆ 25 ಪೈಸೆ ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಗೆ 30 ಪೈಸೆ ಹೆಚ್ಚಳವಾಗಿದೆ.
ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 108.15 ರೂ. ಆಗಿದ್ದು, ಡೀಸೆಲ್ ದರ 98.12 ತಲುಪಿದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 105.65 ರೂ. ಆಗಿದ್ದು, ಡೀಸೆಲ್ ದರ 95.98 ರೂ. ತಲುಪಿದೆ.