ಸಿ.ಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ

ಹೆಬ್ರಿ: ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಹೆಬ್ರಿ ಸಂತೆಕಟ್ಟೆಯ ಅರ್ಬೆಟ್ಟು ಭೀಮರಾಯ ಕಾಮತ್ ಮತ್ತು ಭಾಗ್ಯಶ್ರೀ ಕಾಮತ್ ದಂಪತಿಯ ಪುತ್ರ ಗಣೇಶ ಕಾಮತ್ ಅವರು ಉತ್ತೀರ್ಣರಾಗಿದ್ದಾರೆ. ಇವರು ಸಿಎ ಎಂ. ರವಿ ರಾವ್ ಅವರ ಮಾರ್ಗದರ್ಶನದಲ್ಲಿ ಆರ್ಟಿಕಲ್ ಶಿಪ್ ಮುಗಿಸಿದ್ದಾರೆ.