ಉಡುಪಿ: ಪರ್ಕಳ ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಬೆಳ್ಳಿಬೆಡಗು ಸಂಭ್ರಮಾಚರಣೆಯಲ್ಲಿದ್ದು, ಪರ್ಕಳ ರಾ.ಹೆ. ಪಾರ್ಶ್ವದಲ್ಲಿ ನಿರ್ಮಿಸಿದ ‘ಶ್ರೀ ದುರ್ಗ ಸಹಕಾರ ಸೌಧ’ ನೂತನ ಕಟ್ಟಡ ಉದ್ಘಾಟನೆಯು ಅ.12ರಂದು ನಡೆಯಲಿದೆ.
ನೂತನ ಕಟ್ಟಡದ ಉದ್ಘಾಟನೆ ಆಮಂತ್ರಣ ಪತ್ರಿಕೆಯನ್ನು ಕಾರ್ಕಳ ರಾಜಾಪುರ ಸಾರಸ್ವತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ರವೀಂದ್ರ ಪ್ರಭು ಕಡಾರಿ ಬಿಡುಗಡೆಗೊಳಿಸಿದರು.
ಸೊಸೈಟಿ ಅಧ್ಯಕ್ಷ ಅಶೋಕ್ ಕಾಮತ್ ಕೊಡಂಗೆ, ಉಪಾಧ್ಯಕ್ಷ ಪಾಂಡುರಂಗ ಕಾಮತ್, ಸಿಇಒ ನಿತ್ಯಾನಂದ ನಾಯಕ್ ನರಸಿಂಗೆ, ನಿರ್ದೇಶಕರಾದ ರಾಮಕೃಷ್ಣ ನಾಯಕ್ ಪರ್ಕಳ, ಸದಾನಂದ ನಾಯಕ್ ಹೆರ್ಗ, ನರಸಿಂಹ ನಾಯಕ್ ಮಣಿಪಾಲ, ಮಹೇಶ್ ನಾಯಕ್ ಅಂಬಲಬೆಟ್ಟು ರವೀಂದ್ರ ಪಾಟ್ಕರ್ ಬಂಟಕಲ್, ವಿಜೇತ್ ಕುಮಾರ್ ಬೆಳ್ಳರ್ಪಾಡಿ, ಗಣಪತಿ ನಾಯಕ್ ದೇವಿನಗರ, ಜಯಂತಿ ನಾಯಕ್ ಪರ್ಕಳ, ರೂಪಾ ನಾಯಕ್ ದೇವಿನಗರ, ಗಣಪತಿ ಪ್ರಭು ಕುಕ್ಕೆಹಳ್ಳಿ ಉಪಸ್ಥಿತರಿದ್ದರು.


















