ಪಡುಬಿದ್ರಿ: ಈಜಲು ತೆರಳಿದ್ದ ಇಬ್ಬರು ಯುವಕರು ಮೃತ್ಯು; ಓರ್ವನ ರಕ್ಷಣೆ

ಪಡುಬಿದ್ರಿ: ಈಜಲು ಹೋಗಿದ್ದ ಮೂವರು ಯುವಕರ ಪೈಕಿ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಇನ್ನೋರ್ವ ಯುವಕನನ್ನು ರಕ್ಷಣೆ ಮಾಡಿದ ಘಟನೆ ಇಂದು ಸಂಜೆ ಪಡುಬಿದ್ರಿ ಠಾಣಾ ವ್ಯಾಪ್ತಿಯ ಹೆಜಮಾಡಿ ಕಾಮಿನಿ ಹೊಳೆಯಲ್ಲಿ ನಡೆದಿದೆ.

ಹೆಜಮಾಡಿಯ ಸುಲೈಮಾನ್ ಕಬೀರ್ ಎಂಬುವರ ಪುತ್ರ ಮೋಸಿನ್(16) ಮತ್ತು ರಮ್ಲಾನ್ ಎಂಬುವರ ಪುತ್ರ ಮೊಹಮ್ಮದ್ ರಾಯಿಸ್ (16) ಮೃತಪಟ್ಟ ದುರ್ದೈವಿಗಳು. ಮೊಹಮ್ಮದ್ ನಬೀಲ್ ಎಂಬಾತನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.